ನವದೆಹಲಿ: ನ್ಯೂಜಿಲೆಂಡ್ನ ಸಂಸತ್ ಸದಸ್ಯರಾಗಿ ಆಯ್ಕೆಯಾದ ಭಾರತೀಯ ಮೂಲದ ಡಾ.ಗೌರವ್ ಶರ್ಮಾ ಅವರು ಬುಧವಾರ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಇತಿಹಾಸ ಸೃಷ್ಟಿಸಿದ್ದಾರೆ.
33 ವರ್ಷದ ಡಾ. ಗೌರವ್ ಶರ್ಮಾ ಮೂಲತಃ ಹಿಮಾಚಲ ಪ್ರದೇಶದ ಹಮೀರ್ಪುರ ಜಿಲ್ಲೆಯವರಾಗಿದ್ದು, ಹ್ಯಾಮಿಲ್ಟನ್ ವೆಸ್ಟ್ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದಿದ್ದರು.
“ನ್ಯೂಜಿಲ್ಯಾಂಡ್ ಸಂಸತ್ತಿನಲ್ಲಿ ಕಿರಿಯ, ಹೊಸದಾಗಿ ಚುನಾಯಿತರಾದ ಸಂಸದರಲ್ಲಿ ಒಬ್ಬರಾದ ಡಾ. ಗೌರವ್ ಶರ್ಮಾ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು, ಮೊದಲು ನ್ಯೂಜಿಲ್ಯಾಂಡಿನ ಸ್ಥಳೀಯ ಮಾವೊರಿ ಭಾಷೆಯಲ್ಲಿ, ನಂತರ ಭಾರತದ ಶಾಸ್ತ್ರೀಯ ಭಾಷೆ- ಸಂಸ್ಕೃತದಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು. ಇದು ಭಾರತ ಮತ್ತು ನ್ಯೂಜಿಲೆಂಡ್ನ ಸಾಂಸ್ಕೃತಿಕ ಸಂಪ್ರದಾಯಗಳ ಬಗ್ಗೆ ಅವರು ಹೊಂದಿರುಬ ಆಳವಾದ ಗೌರವವನ್ನು ತೋರಿಸುತ್ತದೆ” ಎಂದು ನ್ಯೂಜಿಲೆಂಡ್ನ ಭಾರತ ಹೈಕಮಿಷನರ್ ಮುಕ್ತೇಶ್ ಪರೇಶಿ ಟ್ವೀಟ್ ಮಾಡಿದ್ದಾರೆ.
ಗೌರವ್ ಶರ್ಮಾ ವೃತ್ತಿಯಲ್ಲಿ ವೈದ್ಯರಾಗಿದ್ದು, ಹ್ಯಾಮಿಲ್ಟನ್ ವೆಸ್ಟ್ನಿಂದ ಗೆದ್ದಿದ್ದರು. ಅವರು ಲೇಬರ್ ಪಕ್ಷದ ಅಭ್ಯರ್ಥಿಯಾಗಿದ್ದು, ನ್ಯಾಷನಲ್ ಪಾರ್ಟಿಯ ಟಿಮ್ ಮ್ಯಾಕಿಂಡೋ ಅವರನ್ನು 4,386 ಮತಗಳಿಂದ ಸೋಲಿಸಿದ್ದಾರೆ.
#LIVE | MP for Hamilton West Dr Gaurav Sharma takes oath at New Zealand Parliament https://t.co/YlgZYcFl2B
— Indian Weekender (@indianweekender) November 24, 2020
@gmsharmanz, one of the youngest, newly elected MP in NZ Parliament took oath today, first in NZ’s indigenous Maori language, followed by India’s classical language- Sanskrit, showing deep respect for cultural traditions of both India and New Zealand. @MEAIndia @ICCR_Delhi https://t.co/dZU1RCePeH
— Muktesh Pardeshi (@MukteshPardeshi) November 25, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.