ನವದೆಹಲಿ: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ)ದ ಸಿಇಒ ಆದರ್ ಪೂನವಾಲ್ಲಾ ಗುರುವಾರ ಆಕ್ಸ್ಫರ್ಡ್ ಕೋವಿಡ್-19 ಲಸಿಕೆ ಆರೋಗ್ಯ ಕಾರ್ಯಕರ್ತರು ಮತ್ತು ವೃದ್ಧರಿಗೆ ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಮತ್ತು ಸಾಮಾನ್ಯ ನಾಗರಿಕರಿಗೆ ಏಪ್ರಿಲ್ ವೇಳೆಗೆ ಲಭ್ಯವಾಗಬೇಕಿದೆ ಎಂದು ಹೇಳಿದ್ದಾರೆ.
ಅಂತಿಮ ಪ್ರಯೋಗ ಫಲಿತಾಂಶಗಳು ಮತ್ತು ನಿಯಂತ್ರಕ ಅನುಮೋದನೆಗಳನ್ನು ಅವಲಂಬಿಸಿ ಸಾರ್ವಜನಿಕರಿಗೆ ಅಗತ್ಯವಿರುವ ಎರಡು ಡೋಸ್ಗಳಿಗೆ ಗರಿಷ್ಠ ಅಂದರೆ 1,000 ರೂ.ಗಳಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಎರಡು ಯುಎಸ್ ಲಸಿಕೆಗಳಾದ Pfizer ಮತ್ತು Modern ಹಂತ -3 ಪ್ರಯೋಗದ ಪ್ರಾಥಮಿಕ ಆವಿಷ್ಕಾರಗಳಲ್ಲಿ 95% + ಯಶಸ್ಸಿನ ಪ್ರಮಾಣವನ್ನು ತೋರಿಸಿದೆ, ಮತ್ತು ಅಸ್ಟ್ರಾಜೆನೆಕಾ / ಆಕ್ಸ್ಫರ್ಡ್ ಲಸಿಕೆ ವಯಸ್ಸಾದ ಜನರಲ್ಲಿ 99% ಬಲವಾದ ರೋಗನಿರೋಧಕ ಪ್ರತಿಕ್ರಿಯೆ ತೋರಿಸಿದೆ ಎಂದು ಹೇಳಲಾಗಿದೆ.
“ಬಹುಶಃ 2024 ರ ವೇಳೆಗೆ ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಸಿಗುತ್ತದೆ. ಏಕೆಂದರೆ ಬಜೆಟ್, ಲಸಿಕೆ, ಲಾಜಿಸ್ಟಿಕ್ಸ್, ಮೂಲಸೌಕರ್ಯಗಳು ಲಸಿಕೆ ವಿತರಣೆಗೆ ಬೇಕಾಗುತ್ತವೆ ಮತ್ತು ಜನರು ಲಸಿಕೆ ತೆಗೆದುಕೊಳ್ಳಲು ಸಿದ್ಧರಿರಬೇಕಾಗುತ್ತದೆ. ಆದ್ದರಿಂದ 80-90% ಜನಸಂಖ್ಯೆಗೆ ಲಸಿಕೆ ಹಾಕಲು 3 ವರ್ಷ ಬೇಕಾಗುತ್ತದೆ. 2024 ವೇಳೆಗೆ ಎಲ್ಲರಿಗೂ ಎರಡು-ಡೋಸ್ ಲಸಿಕೆ ತೆಗೆದುಕೊಳ್ಳಲು ಸಾಧ್ಯವಾಗಲಿದೆ”ಎಂದು ಪೂನವಾಲ್ಲಾ ಹೇಳಿದ್ದಾರೆ.
ಫೆಬ್ರವರಿ 2021 ರ ವೇಳೆಗೆ ಭಾರತ ಆಕ್ಸ್ಫರ್ಡ್ ಕೋವಿಡ್ ಲಸಿಕೆ ಪಡೆಯಬಹುದು, 2 ಡೋಸ್ಗಳಿಗೆ 1000 ರೂ ವೆಚ್ಚ ತಗುಲಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.