ಲಂಡನ್: ಯುಕೆ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರು ದೀಪಾವಳಿ ಪ್ರಯುಕ್ತ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ದೀಪಾವಳಿ ಸಂದೇಶವನ್ನು ನೀಡಿದ್ದಾರೆ. ಅಲ್ಲದೆ, ಸಾಂಕ್ರಾಮಿಕದ ಸಂದರ್ಭದಲ್ಲಿ ದೀಪಾವಳಿ ಹಬ್ಬವು ಸಾಕಷ್ಟು ಭರವಸೆ ಮತ್ತು ಸಕಾರಾತ್ಮಕತೆಯನ್ನು ಹೊತ್ತು ತಂದಿದೆ ಎಂದು ಹೇಳಿದ್ದಾರೆ.
ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಜನರಿಗೆ ವರ್ಚುವಲ್ ಆಗಿ ಶುಭಾಶಯಗಳನ್ನು ಕೋರಿರುವ ಬೋರಿಸ್, ಈ ಹಬ್ಬ ಜನರ ಮನೆಗಳಲ್ಲಿ ಬೆಳಕನ್ನು ತಂದಿದೆ ಮತ್ತು ಅವರನ್ನು ಸಾಂಕ್ರಾಮಿಕದಿಂದ ಸುರಕ್ಷಿತವಾಗಿರಿಸಿದೆ ಎಂದಿದ್ದಾರೆ.
“ನನಗೆ ತಿಳಿದಿದೆ, ಕುಟುಂಬದೊಂದಿಗೆ ಮತ್ತು ಸ್ನೇಹಿತರೊಂದಿಗೆ ಸೇರಿ ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ, ಸಮೋಸ ಮತ್ತು ಗುಲಾಬ್ ಜಾಮೂನ್ ಸವಿಯುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದು” ಎಂದಿದ್ದಾರೆ.
“ನಿಮ್ಮ ತ್ಯಾಗ ಮತ್ತು ಸರಿಯಾದ ಕಾರ್ಯ ಮಾಡುವ ನಿಮ್ಮ ದೃಢನಿಶ್ಚಯ ನಿಜವಾಗಿಯೂ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ಹಿಂದೂಗಳು, ಸಿಕ್ಕರು ಮತ್ತು ಜೈನರು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾನುಭೂತಿ, ಒಗ್ಗಟ್ಟಿನ ಮನೋಭಾವದ ಮೂಲಕ ಹಬ್ಬವನ್ನು ಆಚರಿಸುತ್ತಿದ್ದಾರೆ” ಎಂದಿದ್ದಾರೆ.
Great message by British Prime Minister @sgurumurthy pic.twitter.com/XbrX8a6Ezw
— Dr Krishna Hande (@krishna_hande) November 9, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.