ನವದೆಹಲಿ: ಏಕೀಕೃತ ಪಾವತಿ ವ್ಯವಸ್ಥೆ-ಯುಪಿಐ ವಹಿವಾಟು 80% ರಷ್ಟು ಏರಿಕೆಯಾಗಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ತಿಳಿಸಿದ್ದಾರೆ.
ಯುಪಿಐ ವಹಿವಾಟಿನ ಕುರಿತು ಮಾಹಿತಿ ನೀಡಿರುವ ಅವರು, 2019ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ 2020ರ ಅಕ್ಟೋಬರ್ ತಿಂಗಳಿನಲ್ಲಿ ಯುಪಿಐ ಮೂಲಕ ಮಾಡುತ್ತಿರುವ ಪಾವತಿ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಹಿವಾಟು ಮೌಲ್ಯ ಸಹ ದ್ವಿಗುಣಗೊಂಡಿದ್ದು, ಈ ಕಾರಣದಿಂದಾಗಿ 80% ದಷ್ಟು ವಹಿವಾಟು ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಳೆದ ಅಕ್ಟೋಬರ್ ತಿಂಗಳಲ್ಲಿ 200 ಕೋಟಿ ವಹಿವಾಟುಗಳು ಯುಪಿಐ ಮೂಲಕ ನಡೆದಿವೆ. 2019ರ ಅಕ್ಟೋಬರ್ ತಿಂಗಳಲ್ಲಿ 140 ಕೋಟಿ ವಹಿವಾಟುಗಳು ನಡೆದಿದ್ದವು. ಜತೆಗೆ, ವಹಿವಾಟಿನ ಗಾತ್ರ ಶೇ.101ರಷ್ಟು ಹೆಚ್ಚಳವಾಗಿದೆ. ಪಾವತಿ ಮೌಲ್ಯ 1 ಕೋಟಿ 91 ಲಕ್ಷದಿಂದ 3 ಕೋಟಿ, 86 ಲಕ್ಷಕ್ಕೇರಿದೆ ಎಂದವರು ಮಾಹಿತಿ ನೀಡಿದ್ದಾರೆ.
Amazing! UPI crossed the 2-billion transaction mark in October 2020. UPI volume has grown 80 % from 1.14 billion transactions in October 2019 to 2.07 billion transactions last month. The transaction value has jumped 101 % from Rs 1,91,359.94 Cr to Rs 3,86,106.74 Cr.
— Amitabh Kant (@amitabhk87) November 2, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.