ನವದೆಹಲಿ: ಪಾಕಿಸ್ಥಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ‘ಮೋದಿ ಮೋದಿ’ ಘೋಷಣೆ ಕೇಳಿ ಬಂದಿದೆ. ಮೊದಲು ‘ವೋಟಿಂಗ್ ವೋಟಿಂಗ್’ ಘೋಷಣೆ ಮೊಳಗಿತ್ತು. ಬಳಿಕ ಚರ್ಚೆ ಇಸ್ಲಾಮೊಫೋಬಿಯಾ ಮತ್ತು ಪ್ರವಾದಿ ಕಾರ್ಟೂನ್ನತ್ತ ತಿರುಗಿದಾಗ ಮೋದಿ ಮೋದಿ ಘೋಷಣೆ ಮೊಳಗಲಾರಂಭಿಸಿದೆ.
ಸೋಮವಾರ, ಪಾಕಿಸ್ಥಾನ ನ್ಯಾಷನಲ್ ಅಸೆಂಬ್ಲಿ ಫ್ರೆಂಚ್ ಅಧ್ಯಕ್ಷ ಬರಾಕ್ ಮ್ಯಾನುವೆಲ್ ಮ್ಯಾಕ್ರೋನ್ ಅವರು ಹೇಳಿಕೆಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಿತು.
ಅಸೆಂಬ್ಲಿಯೊಳಗಿನ ನಿರಂತರ ಗಲಾಟೆಗಳ ಮಧ್ಯೆ, ಪಾಕಿಸ್ಥಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರು ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರ ಖಂಡಿಸಿ ಸರ್ಕಾರ ಮತ್ತು ಪ್ರತಿಪಕ್ಷಗಳು ಸರ್ವಾನುಮತದ ನಿರ್ಣಯವನ್ನು ಮಂಡಿಸಲು ಒಪ್ಪಿಕೊಂಡಿವೆ ಎಂದು ಘೋಷಿಸಿದರು,
ಖುರೇಷಿ ನಂತರ ಬಲೂಚಿಸ್ತಾನ್ ಚಳವಳಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಆಜಾದಿಯ ಘೋಷಣೆಗಳನ್ನು ಹೇಗೆ ಎತ್ತಲಾಗುತ್ತಿದೆ ಎಂಬ ಬಗ್ಗೆ ಭಾಷಣವನ್ನು ಖುರೇಷಿ ಆರಂಭಿಸುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಅವರ ಭಾಷಣಕ್ಕೆ ಪದೇ ಪದೇ ಅಡ್ಡಿಪಡಿಸುತ್ತಿದ್ದರು. ಇಸ್ಲಾಮೋಫೋಬಿಯಾ ಕುರಿತ ಚರ್ಚೆಯ ಸಮಯದಲ್ಲಿ, ಖುರೇಷಿ ಬಲೂಚಿಸ್ತಾನ್ ರಾಜಕಾರಣಿಗಳ ಆಜಾದಿ ಘೋಷಣೆಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿ, ಅದಕ್ಕೆ ಮೋದಿಯವರನ್ನು ದೂಷಿಸಿದ್ದಾರೆ. ಈ ವೇಳೆ ಪ್ರತಿಪಕ್ಷಗಳು ಮೋದಿ ಘೋಷಣೆಳನ್ನು ಎತ್ತಲಾರಂಭಿಸಿವೆ ಎಂದು ಹೇಳಲಾಗಿದೆ.
Modi Modi in Pakistan’s Parliament..Yeh to Abhi jhanki hai Lahore Karanchi baki hai ????? pic.twitter.com/98xGM4sEPv
— Akram Shah (Hindustani) (@AkramShahBJP) October 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.