ನವದೆಹಲಿ: ಭಾರತದೊಂದಿಗೆ ಮತ್ತಷ್ಟು ನಿಕಟ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ತನ್ನ ಎಫ್ -18 ನೇವಲ್ ಫೈಟರ್ ಜೆಟ್ಗಳನ್ನು ಭಾರತೀಯ ನೌಕಾಪಡೆಯ ಅವಶ್ಯಕತೆಗಾಗಿ ಒದಗಿಸಲು ಮುಂದೆ ಬಂದಿದೆ.
ಭಾರತೀಯ ನೌಕಾಪಡೆಯು ಕೆಲವು ವರ್ಷಗಳ ಹಿಂದೆ ತನ್ನ ಐಎನ್ಎಸ್ ವಿಕ್ರಮಾದಿತ್ಯ ಮತ್ತು ನಿರ್ಮಾಣ ಹಂತದಲ್ಲಿದ್ದ ಸ್ಥಳೀಯ ವಿಮಾನವಾಹಕ ನೌಕೆಗಳನ್ನು ಕಾರ್ಯಾಚರಿಸುವ ಸಲುವಾಗಿ 57 ನೇವಲ್ ಫೈಟರ್ ಏರ್ಕ್ರಾಫ್ಟ್ಗಳನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿತ್ತು.
“2 + 2 ಸಭೆಗಳಲ್ಲಿ ಉಭಯ ದೇಶಗಳ ರಕ್ಷಣಾ ನಿಯೋಗಗಳ ನಡುವಿನ ಚರ್ಚೆಯ ಸಂದರ್ಭ ಸರ್ಕಾರದ ಪ್ರಸ್ತಾವನೆಯಡಿಯಲ್ಲಿ ಭಾರತೀಯ ನೌಕಾಪಡೆಗೆ ತಮ್ಮ ನೇವಲ್ ಫೈಟರ್ ಜೆಟ್ ಎಫ್ -18 ಅನ್ನು ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ” ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ಅಮೆರಿಕ ಸರ್ಕಾರವು ತಮ್ಮ ಎಫ್ -18 ಜೆಟ್ ಅನ್ನು ಮಾನವರಹಿತ ವಿಮಾನ ಸೀ ಗಾರ್ಡಿಯನ್ ಜೊತೆಗೆ ಭಾರತೀಯ ನೌಕಾಪಡೆಗೆ ಮಾರಾಟ ಮಾಡಲು ಮತ್ತು ಇತರ ಹಲವಾರು ವ್ಯವಸ್ಥೆಗಳನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಮಾರಾಟ ಮಾಡಲು ಇತ್ತೀಚಿನ ದಿನಗಳಲ್ಲಿ ಮುಂದಾಗಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.