×
Home About Us Advertise With s Contact Us

ಟ್ಯೂನಿಶಿಯಾ ದಾಳಿಯ ಹೊಣೆ ಹೊತ್ತ ಇಸಿಸ್

isisಟ್ಯೂನಿಶ್: ಇತ್ತೀಚಿಗೆ ಟ್ಯೂನಿಶಿಯಾದ ಪ್ರಮುಖ ಪ್ರವಾಸಿ ತಾಣವಾದ ವಸ್ತು ಸಂಗ್ರಹಾಲಯದ ಮೇಲೆ ನಡೆದ ಭೀಕರ ದಾಳಿಯ ಹೊಣೆಯನ್ನು ಇಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಅಲ್ಲದೇ ಇದು ‘ಮಳೆಯ ಮೊದಲ ಬಿಂದು’ ಎಂದು ಹೇಳಿಕೊಂಡಿದೆ.

ಟ್ಯೂನಿಶಿಯಾದ ಪಾರ್ಲಿಮೆಂಟ್ ಗ್ರೌಂಡ್‌ನಲ್ಲಿರುವ ಖ್ಯಾತ ಬರ್ಡೊ ವಸ್ತು ಸಂಗ್ರಹಾಲಯದ ಮೇಲೆ ದಾಳಿ ನಡೆಸಿದ್ದ ಶಸ್ತ್ರಧಾರಿ ಉಗ್ರರು ಜಪಾನ್, ಬ್ರಿಟನ್, ಸ್ಪಾನಿಶ್, ಇಟಲಿ ಸೇರಿದಂತೆ ವಿವಿಧ ದೇಶಗಳ ಒಟ್ಟು 20 ನಾಗರಿಕರನ್ನು ಹತ್ಯೆ ಮಾಡಿದ್ದರು.

ಆದರೆ ಇದು ಉಗ್ರರ ದಾಳಿಯೆಂದು ಟ್ಯೂನಿಶಿಯಾ ಸರ್ಕಾರ ಅಧಿಕೃತವಾಗಿ ಘೋಷಿಸಿರಲಿಲ್ಲ. ಬದಲಿಗೆ ಅಪರಿಚಿತ ಶಸ್ತ್ರಧಾರಿಗಳು ಎಸಗಿದ ಕೃತ್ಯ ಎಂದೇ ಹೇಳಿತ್ತು. ಅಲ್ಲದೇ ಇವರು ಲಿಬಿಯಾದಲ್ಲಿ ಜಿಹಾದಿ ತರಬೇತಿ ಪಡೆದಿದ್ದರು ಎಂದು ಹೇಳಿತ್ತು. ಆದರೆ ಇದೀಗ ಇಸಿಸ್ ಉಗ್ರರು ಸ್ವತಃ ಈ ದಾಳಿಯ ರುವಾರಿಗಳು ನಾವೇ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೇ ಈ ಘಟನೆ ಕೇವಲ ಮಳೆಯ ಮೊದಲ ಬಿಂದು ಎನ್ನುವ ಮೂಲಕ ಮತ್ತಷ್ಟು ದಾಳಿಗಳನ್ನು ನಡೆಸುವ ಎಚ್ಚರಿಕೆಯನ್ನು ನೀಡಿದೆ.

 

Recent News

Back To Top
error: Content is protected !!