ನವದೆಹಲಿ: ಭಾರತವು ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ನಿನ್ನೆ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) 250 ಕಿಲೋಮೀಟರ್ ದಾಳಿ ವ್ಯಾಪ್ತಿಯನ್ನು ಹೊಂದಿರುವ ಪೃಥ್ವಿ-2 ಬ್ಯಾಲೆಸ್ಟಿಕ್ ಮಿಸೈಲ್ ಅನ್ನು ಪರೀಕ್ಷೆಗೊಳಪಡಿಸಿ ಯಶಸ್ವಿಯಾಗಿದೆ.
ಒರಿಸ್ಸಾದ ಬಾಲಸೋರ್ ಕರಾವಳಿ ತೀರದ ಉಡಾವಣಾ ಕೇಂದ್ರದಿಂದ ಪರಮಾಣು ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿಯ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಪೃಥ್ವಿ-2 ಕ್ಷಿಪಣಿ 250 ಕಿಲೋಮೀಟರ್ ದೂರದವರೆಗೆ ಸ್ಟ್ರೈಕ್ ರೇಂಜ್ ಹೊಂದಿದ್ದು, 1 ಟನ್ ಅಣ್ವಸ್ತ್ರ ಸಿಡಿತಲೆಯನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. 9 ಮೀಟರ್ ಎತ್ತರವಿದೆ.
ಡಿಆರ್ ಡಿಓ ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್ಮೆಂಟ್ ಪ್ರೋಗ್ರಂ ಅಡಿಯಲ್ಲಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಈಗಾಗಲೇ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಭಾಗವಾಗಿದೆ.
Today India successfully testfired the over 250 km strike range Prithvi-2 ballistic missile off the coast of Balasore, Odisha. The DRDO-developed Missile is already the part of the Strategic Forces Command.
— ANI (@ANI) October 16, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.