ನವದೆಹಲಿ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರಭಾವ ನಿರಂತರವಾಗಿ ಬೆಳೆಯುತ್ತಿದೆ ಎಂದು ಭಾರತದ ಇಸ್ರೇಲಿ ರಾಯಭಾರಿ ರಾನ್ ಮಾಲ್ಕಾ ಹೇಳಿದ್ದಾರೆ.
ಪಶ್ಚಿಮ ಏಷ್ಯಾ ಮತ್ತು ವಿಶೇಷವಾಗಿ ಇಸ್ರೇಲ್ ಸೇರಿದಂತೆ ಜಾಗತಿಕ ವಿಷಯಗಳ ಬಗ್ಗೆ ಭಾರತದ ಕಾರ್ಯತಂತ್ರದ ನಿಲುವನ್ನು ಇತರ ದೇಶಗಳು ತೀವ್ರವಾಗಿ ಗಮನಿಸುತ್ತಿವೆ ಮತ್ತು ಅನೇಕರು ಇದನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾರತದೊಂದಿಗೆ ಇಸ್ರೇಲಿನ ಆಳವಾದ ಸಂಬಂಧವು ಅರಬ್ ಪ್ರಪಂಚವನ್ನು ಒಳಗೊಂಡಂತೆ ಇತರ ದೇಶಗಳೊಂದಿಗಿನ ಸಂಬಂಧಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಮಾಲ್ಕಾ ಹೇಳಿದ್ದಾರೆ.
ಇಸ್ರೇಲ್ ಮತ್ತು ಮುಸ್ಲಿಂ ಪ್ರಪಂಚದ ನಡುವೆ ಅಥವಾ ಇಸ್ರೇಲ್ ಮತ್ತು ಅರಬ್ ಪ್ರಪಂಚದ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಜಗತ್ತು ಈಗ ಅರ್ಥಮಾಡಿಕೊಂಡಿದೆ ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.
ಒಟ್ಟಾರೆಯಾಗಿ ಭಾರತವು ಬಲಶಾಲಿಯಾಗುತ್ತಿದೆ ಮತ್ತು ಇಸ್ರೇಲ್ ಸಹ ಅದನ್ನೇ ನೋಡಲು ಬಯಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.