ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಆಡಳಿತವು ಮಂಗಳವಾರ ರಾತ್ರಿ ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯನ್ನು ಬಿಡುಗಡೆ ಮಾಡಿದೆ. 14 ತಿಂಗಳ ಸುದೀರ್ಘ ಬಂಧನದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.
ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಯ ಅಧ್ಯಕ್ಷೆಯಾಗಿರುವ ಮುಫ್ತಿಯನ್ನು ಕಳೆದ ವರ್ಷ ಆಗಸ್ಟ್ 5-6 ರಂದು ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಬಂಧನದಲ್ಲಿಡಲಾಗಿತ್ತು.
ಮೊದಲು, ಸಿಆರ್ಪಿಸಿಯ ಸೆಕ್ಷನ್ 107 ಮತ್ತು 151 ರ ಅಡಿಯಲ್ಲಿ ಮುಫ್ತಿಯನ್ನು ಬಂಧಿಸಲಾಯಿತು. ನಂತರ, ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಅವರ ಬಂಧನವನ್ನು ವಿಸ್ತರಿಸಲಾಯಿತು. ಆಕೆಯನ್ನು ಮೊದಲು ಚೆಶ್ಮಾ ಶಾಹಿ ಅತಿಥಿ ಗೃಹದಲ್ಲಿಇರಿಸಲಾಗಿತ್ತು. ನಂತರ, ಅವರನ್ನು ಎಂಎ ಲಿಂಕ್ ರಸ್ತೆಯಲ್ಲಿರುವ ಮತ್ತೊಂದು ಅತಿಥಿ ಗೃಹಕ್ಕೆ ಸ್ಥಳಾಂತರಿಸಲಾಯಿತು, ಅಂತಿಮವಾಗಿ ಅವರನ್ನು ಅವರ ನಿವಾಸದಲ್ಲಿ ಬಂಧನದಲ್ಲಿಡಲಾಯಿತು.
370ನೇ ವಿಧಿ ರದ್ಧತಿಯ ಬಳಿಕ ಕಣಿವೆಯಲ್ಲಿ ಅಶಾಂತಿ ತಲೆದೋರಬಾರದು ಎಂಬ ಕಾರಣಕ್ಕೆ ಅವರನ್ನು ಗೃಹಬಂಧನಕ್ಕೆ ಒಳಪಡಿಸಲಾಯಿತು. ಅವರ ರಾಜಕೀಯ ಪ್ರತಿಸ್ಪರ್ಧಿಗಳಾದ ಒಮರ್ ಮತ್ತು ಫಾರೂಕ್ ಅಬ್ದುಲ್ಲಾ ಅವರನ್ನು ಸಹ ಬಂಧನಕ್ಕೆ ಒಳಪಡಿಸಲಾಗಿತ್ತು, ಏಳು ತಿಂಗಳ ಅವಧಿಯ ನಂತರ ಈ ವರ್ಷದ ಮಾರ್ಚ್ನಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.