ನವದೆಹಲಿ: ದೇಶದಲ್ಲಿನ 24 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಘೋಷಿಸಿದೆ.
ನವದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ನಕಲಿ ವಿವಿಗಳಿರುವುದಾಗಿ ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ತಿಳಿಸಿದ್ದಾರೆ. ಈ ವಿವಿಗಳು ಯುಜಿಸಿ ಆಶಯಗಳಿಗೆ, ಯುಜಿಸಿ ಕಾಯ್ದೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ದೇಶದಾದ್ಯಂತ ಇರುವ 24 ನಕಲಿ ವಿವಿಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಪೂರಕ ಮಾಹಿತಿ ನೀಡುವ, ಎಚ್ಚರಿಕೆ ಮೂಡಿಸುವ ಕೆಲಸವನ್ನೂ ಯುಜಿಸಿ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಅನಧಿಕೃತ ವಿವಿ ಗಳನ್ನು ನಕಲಿ ವಿವಿ ಗಳೆಂದು ಘೋಷಣೆ ಮಾಡಿರುವ ಯುಜಿಸಿ, ಇವುಗಳು ಪದವಿ ನೀಡುವ ಅಧಿಕಾರವನ್ನು ಹೊಂದಿಲ್ಲ ಎಂದೂ ಸ್ಪಷ್ಟವಾಗಿ ತಿಳಿಸಿದೆ. ಉತ್ತರ ಪ್ರದೇಶದಲ್ಲಿ 8 ನಕಲಿ ವಿವಿಗಳಿದ್ದರೆ, ನವದೆಹಲಿಯಲ್ಲಿ 7, ಒಡಿಶಾ, ಪ.ಬಂಗಾಳಗಳಲ್ಲಿ ತಲಾ 2, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪುದುಚೇರಿಯಲ್ಲಿ ತಲಾ 1 ನಕಲಿ ವಿವಿಗಳಿವೆ ಎಂದು ಯುಜಿ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.