ಜೆರುಸಲೆಮ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪರಸ್ಪರ ವರ್ಚುವಲ್ ಮಾತುಕತೆಯನ್ನು ನಡೆಸಿದ್ದಾರೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಬಗ್ಗೆ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಮತ್ತು ಸೌರಶಕ್ತಿ ಕ್ಷೇತ್ರದಲ್ಲಿ ನಾವೀನ್ಯತೆ ಕುರಿತು ಅವರ ಮಾತುಕತೆ ಕೇಂದ್ರೀಕರಿಸಿತ್ತು.
ಕೋವಿಡ್-19 ಕಾಣಿಸಿಕೊಂಡ ಬಳಿಕ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ 4ನೇ ಸಭೆ ಇದಾಗಿದೆ.
“ತಾಂತ್ರಿಕ ಸಹಕಾರ ಮತ್ತು ಪರೀಕ್ಷೆಗಳಿಗೆ ಒತ್ತು ನೀಡಿ ಕರೋನವೈರಸ್ ವಿರುದ್ಧದ ಹೋರಾಟದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮುಂದುವರಿಸಲು ಮತ್ತು ಮುನ್ನಡೆಸಲು ಉಭಯ ನಾಯಕರು ಒಪ್ಪಿಕೊಂಡರು” ಎಂದು ಇಸ್ರೇಲಿ ಪ್ರಧಾನ ಮಂತ್ರಿ ಅಧಿಕೃತ ಟ್ವಿಟರ್ ಹ್ಯಾಂಡಲ್ ತಿಳಿಸಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಇಸ್ರೇಲ್ ಸಹಕಾರ ನೀಡುತ್ತಿದ್ದು, ಇಸ್ರೇಲ್ನಿಂದ ಉನ್ನತ ಮಟ್ಟದ ನಿಯೋಗವು ಭಾರತದಲ್ಲಿ ಕ್ಷಿಪ್ರ ಪರೀಕ್ಷಾ ಕಿಟ್ನಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ.
ಕರೋನವೈರಸ್ ವಿರುದ್ಧದ ಲಸಿಕೆ ಸಾಮೂಹಿಕ ಉತ್ಪಾದನೆಗೆ ಉಭಯ ದೇಶಗಳು ಸಹಕರಿಸಲಿವೆ ಎಂದು ಇಲ್ಲಿನ ಮೂಲಗಳು ತಿಳಿಸಿವೆ.
ಅಲ್ಲದೇ, “ಉಭಯ ದೇಶಗಳು ಮತ್ತು ಇಡೀ ಪ್ರಪಂಚದ ಆರ್ಥಿಕತೆಗೆ ಅನುಕೂಲವಾಗುವಂತಹ ಹೆಚ್ಚು ಅಗ್ಗದ ಪರಿಹಾರಗಳನ್ನು ಜಂಟಿಯಾಗಿ ಸಾಧಿಸುವ ಸಲುವಾಗಿ ಸೌರಶಕ್ತಿ ಕ್ಷೇತ್ರದಲ್ಲಿ ನಾವೀನ್ಯತೆ ಕುರಿತು ಡಿಜಿಟಲ್ ಕಾನ್ಫರೆನ್ಸ್ ನಡೆಸಲು ಇಬ್ಬರೂ ನಾಯಕರು ಒಪ್ಪಿಕೊಂಡರು” ಎಂದು ಇಸ್ರೇಲಿ ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.
Prime Minister Benjamin Netanyahu spoke today with Indian Prime Minister @NarendraModi. The two leaders agreed to continue and advance bilateral cooperation in the fight against the coronavirus with emphasis on technological cooperation and tests. pic.twitter.com/r8Q7U8qGsX
— PM of Israel (@IsraeliPM) October 5, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.