ನವದೆಹಲಿ: ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ನೀಡಲು ರಕ್ಷಣಾ ಸಚಿವಾಲಯ ಪ್ರಯತ್ನಗಳನ್ನು ನಡೆಸುತ್ತಿದೆ. ಇದೀಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 10 ಲಕ್ಷ ಟನ್ ಹ್ಯಾಂಡ್ ಗ್ರೆನೇಡ್ ಅನ್ನು ತಯಾರಿಸಲು ಭಾರತದ ಖಾಸಗಿ ಕಂಪನಿಯಾದ ಎಕನಾಮಿಕ್ ಎಕ್ಸ್ಪ್ಲೋಸಿವ್ ಲಿಮಿಟೆಡ್ (ಇಇಎಲ್)ಗೆ ಆರ್ಡರ್ ನೀಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಈ ಆರ್ಡರ್ ಅತ್ಯಂತ ಮಹತ್ವದ್ದಾಗಿದೆ. ಯಾಕೆಂದರೆ ಈ ಹ್ಯಾಂಡ್ ಗ್ರೆನೇಡ್ಗಳು, ಈಗಲೂ ಬಳಕೆಯಲ್ಲಿರುವ ಎರಡನೇ ವಿಶ್ವಯುದ್ಧದ ಸಂದರ್ಭದ ವಿಂಟೇಜ್ ಡಿಸೈನ್ ಗ್ರೆನೇಡ್ ನಂ.36 ಅನ್ನು ರಿಪ್ಲೇಸ್ ಮಾಡಲಿವೆ. ಈ ಗ್ರೆನೇಡ್ಗಳನ್ನು ಬೇರೆ ದೇಶಗಳಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತುಅಥವಾ ಆರ್ಡೆನೆನ್ಸ್ ಫ್ಯಾಕ್ಟರಿ ಬೋರ್ಡ್ನಲ್ಲಿ ಉತ್ಪಾದನೆ ಮಾಡಲಾಗುತ್ತಿತ್ತು.
ಎಕನಾಮಿಕ್ ಎಕ್ಸ್ಪ್ಲೋಸಿವ್ ಲಿಮಿಟೆಡ್ ಇದೀಗ ಹ್ಯಾಂಡ್ ಗ್ರೆನೇಡ್ ತಯಾರಿಸುವ ಕಾಂಟ್ರ್ಯಾಕ್ಟ್ ಅನ್ನು ಪಡೆದುಕೊಂಡಿದೆ. ಈ ಕಾಂಟ್ರ್ಯಾಕ್ಟ್ ಮೊತ್ತ ರೂ.400ಕೋಟಿ ಆಗಿದೆ. ಈ ಸಂಸ್ಥೆಯು ಮಲ್ಟಿ ಮೋಡ್ ಹ್ಯಾಂಡ್ ಗ್ರೆನೇಡ್ ಅನ್ನು ತಯಾರಿಸಲಿದೆ. ಇದನ್ನು ಡಿಆರ್ಡಿಓದ ಟರ್ಮಿನಲ್ ಬ್ಯಾಲೆಸ್ಟಿಕ್ ರಿಸರ್ಚ್ ಲ್ಯಾಬೋರೇಟರಿ ಅಭಿವೃದ್ಧಿಪಡಿಸಿದೆ.
2016ರಲ್ಲೇ ಈ ಹ್ಯಾಂಡ್ ಗ್ರೆನೇಡ್ ತಂತ್ರಜ್ಞಾನವನ್ನು ಡಿಆರ್ಡಿಓ ಎಕನಾಮಿಕ್ ಎಕ್ಸ್ಪ್ಲೋಸಿವ್ ಲಿಮಿಟೆಡ್ಗೆ ಹಸ್ತಾಂತರ ಮಾಡಿತ್ತು. ಇದನ್ನು ಭಾರತೀಯ ಮಿಲಿಟರಿಯು ಎಲ್ಲಾ ಹವಮಾನ ಪರಿಸ್ಥಿತಿಗಳಲ್ಲಿ ಪರೀಕ್ಷೆ ನಡೆಸಿದೆ. ಮರುಭೂಮಿ, ಎತ್ತರದ ಪ್ರದೇಶ, ಬಯಲುಸೀಮೆ ಹೀಗೆ ಎಲ್ಲಾ ಹವಮಾನಕ್ಕೂ ಇದು ಸೂಕ್ತವೆಂದು ಸಾಬೀತಾಗಿದೆ.
ಮಲ್ಟಿ ಮೋಡ್ ಹ್ಯಾಂಡ್ ಗ್ರೆನೇಡ್ ಸಂಪೂರ್ಣವಾಗಿ ಭಾರತ ನಿರ್ಮಿತವಾಗಿತ್ತು, ಬೆಲೆಯೂ ಕಡಿಮೆಯಾಗಿದೆ. ಭಾರತೀಯ ಭೂ ಸೇನೆ ಮತ್ತು ವಾಯುಸೇನೆಗೆ ಇದನ್ನು ಪೂರೈಕೆ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.