ನವದೆಹಲಿ: ಸೆಪ್ಟೆಂಬರ್ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು 95,480 ಕೋಟಿ ರೂಪಾಯಿ ಆಗಿದ್ದು, ಈ ವರ್ಷದ ಮಾರ್ಚ್ನಲ್ಲಿ ಲಾಕ್ಡೌನ್ ಪ್ರಾರಂಭವಾದಾಗಿನಿಂದ ಇದು ಮಾಸಿಕ ಆಧಾರದಲ್ಲಿ ಅತಿ ಹೆಚ್ಚು ಸಂಗ್ರಹವಾಗಿದೆ.
ಸೆಪ್ಟೆಂಬರ್ನಲ್ಲಿ ಸಂಗ್ರಹಣೆ ಆಗಸ್ಟ್ ಗಿಂತ 10.4% ಮತ್ತು ಕಳೆದ ವರ್ಷಕ್ಕಿಂತ 4% ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕತೆಯ ಗಮನಾರ್ಹ ಭಾಗವು ಕಾರ್ಯಾಚರಣೆಗಳು ಮತ್ತು ಅಂತರರಾಷ್ಟ್ರೀಯ ವಹಿವಾಟನ್ನು ಪುನರಾರಂಭಿಸುವುದಕ್ಕೆ ವ್ಯಯವಾಗಿದೆ. ಅದರ ನಡುವೆಯೂ ಆರ್ಥಿಕತೆಯು ಯೋಗ್ಯವಾದ ಬೆಳವಣಿಗೆಯನ್ನು ತೋರಿಸಿವೆ. ಆದಾಯದ ಏರಿಕೆ ವ್ಯವಹಾರ ಕಾರ್ಯಾಚರಣೆಗಳಲ್ಲಿ ಸಹಜತೆ ಪುನಃ ಸ್ಥಾಪನೆಗೊಂಡಿದೆ ಎಂಬುದನ್ನು ಸೂಚಿಸುತ್ತದೆ. ಇದು ಆಶಾವಾದವನ್ನು ಮತ್ತೆ ಮೂಡಿಸಿದೆ.
ಒಟ್ಟು ಜಿಎಸ್ಟಿ ಸಂಗ್ರಹಗಳಲ್ಲಿ ಕೇಂದ್ರ ಜಿಎಸ್ಟಿ 17,741 ಕೋಟಿ ರೂ., ರಾಜ್ಯ ಜಿಎಸ್ಟಿ 23,131 ಕೋಟಿ ರೂ., ಏಕೀಕೃತ ಜಿಎಸ್ಟಿ 47,484 ಕೋಟಿ ರೂ. ಮತ್ತು ಸರಕುಗಳ ಆಮದಿಗೆ ಸಂಗ್ರಹಿಸಿದ 22,442 ಕೋಟಿ ರೂ.ಆಗಿದೆ. ಸೆಸ್ ಕಲೆಕ್ಷನ್ 7,124 ಕೋಟಿ ಆಗಿದ್ದು, ಇದರಲ್ಲಿ 788 ಕೋಟಿ ರೂಪಾಯಿ ಆಮದಿನ ಮೇಲೆ ಸಂಗ್ರಹಿಸಿದ ತೆರಿಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.