ವಾಷಿಂಗ್ಟನ್: ಗೂಗಲ್ ‘ಪಿಕ್ಸೆಲ್’ ಬ್ರಾಂಡ್ನ ಅಡಿಯಲ್ಲಿ 5 ಜಿ ತಂತ್ರಜ್ಞಾನ ಸಾಮರ್ಥ್ಯದ ಎರಡು ಸ್ಮಾರ್ಟ್ ಫೋನ್ಗಳನ್ನು ಅನಾವರಣ ಮಾಡಿದೆ.
ಈ ಫೋನ್ಗಳು ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯನ್ನು ಒಳಗೊಂಡಿದೆ. ಪಿಕ್ಸೆಲ್ 5 (ಬೆಲೆ: 699 ಡಾಲರ್) ಮತ್ತು ಪಿಕ್ಸೆಲ್ 4ಎ ‘5ಜಿ ಸ್ಮಾರ್ಟ್ ಫೋನ್ (ಬೆಲೆ: 499 ಡಾಲರ್)ಗಳು ಇವಾಗಿವೆ. ಈಗಾಗಲೇ ಇರುವುದಕ್ಕಿಂತ ಅಧಿಕ ಅನುಕೂಲಕರ ಸೌಲಭ್ಯಗಳನ್ನು ಹೊಂದಿರುವ ಈ ಫೋನ್ಗಳು ಅಕ್ಟೋಬರ್ 15 ರಿಂದಲೇ ಗ್ರಾಹಕರಿಗೆ ಲಭ್ಯವಿರಲಿವೆ ಎಂದೂ ಸಂಸ್ಥೆ ತಿಳಿಸಿದೆ.
ಇನ್ನು ಈ ಹೊಸ ಫೋನ್ಗಳ ಗುಣಲಕ್ಷಣಗಳನ್ನು ಹೇಳುವುದಾದರೆ, 6.2 ಇಂಚು ಡಿಸ್ಪ್ಲೇ, FHD+OLED ಸ್ಕ್ರೀನ್ಗಳನ್ನು ಒಳಗೊಂಡಿದೆ. 6 GB RAM, 128 GB MEMORY, 765 G ಕ್ವಾಲ್ಕಾಮ್ ಸ್ನಾಪ್ ಡ್ರ್ಯಾಗನ್ ಪ್ರೊಸೆಸರ್, 12 MP dual pixel Cam, 16 MP altrawide, 8MP selfy ಲೆನ್ಸ್, 3885 MAH ಬ್ಯಾಟರಿ ಶಕ್ತಿಯನ್ನು ಹೊಂದಿದೆ.
ಆ್ಯಪಲ್ಗೂ ಮೊದಲೇ ಗೂಗಲ್ ತನ್ನ 5 ಜಿ ಸ್ಮಾರ್ಟ್ ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದು ಆ್ಯಪಲ್ ಜೊತೆಗೆ ಸ್ಪರ್ಧೆಯನ್ನು ಏರ್ಪಡಿಸಿದಂತೆ ತೋರುತ್ತಿದೆ. ಇದೇ ಸಂದರ್ಭದಲ್ಲಿ ಗೂಗಲ್ ಅಮೆಜಾನ್ ಫೈರ್ ಟಿವಿಗೆ ಸ್ಪರ್ಧೆ ಒಡ್ಡುವಂತೆ ಗೂಗಲ್ ಟಿವಿ ಫ್ಲಾಟ್ಫಾರ್ಮ್ ಸಹ ಪ್ರಕಟಿಸಿದ್ದು, ಮೊಬೈಲ್ ಆ್ಯಪ್ಗಳ ಮೂಲಕ ಬಳಕೆದಾರರಿಗೆ ಮನೊರಂಜನೆ ನೀಡುವ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.