ನವದೆಹಲಿ: ಅಕ್ಟೋಬರ್ 1 ರಿಂದಲೇ ಜಾರಿಯಾಗುವಂತೆ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ 1989 ಗೆ ತಿದ್ದುಪಡಿ ತಂದಿದೆ.
ಈ ತಿದ್ದುಪಡಿಯಂತೆ ದೇಶದಲ್ಲಿ ವಾಹನ ಸವಾರರು ತಮ್ಮ ವಾಹನಗಳಿಗೆ ಪೂರಕವಾಗುವಂತೆ ಇರುವ ಎಲ್ಲಾ ದಾಖಲೆಗಳನ್ನು ತಮ್ಮೊಂದಿಗೆ ಚಾಲನಾ ಸಮಯದಲ್ಲಿ ಕಡ್ಡಾಯವಾಗಿ ಇರಿಸಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ. ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಅಧಿಕೃತ ದಾಖಲೆಗಳನ್ನು ಇ ಪ್ರತಿಗಳಂತೆ ಅಥವಾ ಹಾರ್ಡ್ಕಾಪಿಗಳನ್ನು ತಮ್ಮೊಂದಿಗೆ ಇರಿಸಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ.
ಅಕ್ಟೋಬರ್ 1 ರಿಂದ ತೊಡಗಿದಂತೆ ದೇಶದೆಲ್ಲೆಡೆ ಏಕರೂಪದ ವಾಹನ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ನಿಯಮಗಳು ಜಾರಿಯಲ್ಲಿರಲಿವೆ. ಹೊಸ ಆದೇಶದಂತೆ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೇಷನ್ ಕಾರ್ಡ್ ಗಳಲ್ಲಿ ಹೊಸ ಚಿಪ್ ಅಳವಡಿಕೆ ಮಾಡಲಾಗುತ್ತದೆ. ಇದರ ಮೂಲಕ ಪೊಲೀಸರು ವಾಹನಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇದು ನಕಲಿ ದಾಖಲೆಗಳು, ಪೊಲೀಸರಿಗೇ ಚಳ್ಳೆ ಹಣ್ಣು ತಿನಿಸುವಂತಹವರ ಕುಕೃತ್ಯಗಳಿಗೂ ಪೂರ್ಣ ವಿರಾಮ ಹಾಕಲಿದೆ ಎಂದು ಮೂಲಗಳು ಹೇಳಿವೆ.
ಈ ಹೊಸ ಕ್ಯೂಆರ್ ಕೋಡ್ ಮತ್ತು ಚಿಪ್ಗಳ ಸಹಾಯದಿಂದ ಸುಮಾರು 10 ವರ್ಷಗಳ ವರೆಗೆ ದಾಖಲೆಗಳನ್ನು ಶೇಖರಿಸಲು ಸಾಧ್ಯವಾಗಲಿದೆ. ಈ ಮೂಲಕವೇ ವಾಹನಕ್ಕೆ ಸಂಬಂಧಿಸಿದಂತೆ ನಿಯಮ ಉಲ್ಲಂಘನೆ, ವಾಹನ ವಿಮೆ ಮೊದಲಾದ ವಿಚಾರಗಳ ಬಗೆಗೂ ಮಾಹಿತಿ ಸಿಗಲಿದೆ. ಇ ಡಾಕ್ಯುಮೆಂಟ್ಗಳಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿಯೂ ಕಾರ್ಯ ಪ್ರವೃತ್ತವಾಗಿದೆ. ಜೊತೆಗೆ ಮೊಬೈಲ್ ಬಳಕೆಯ ಮೂಲಕ ಚಾಲನಾ ನ್ಯಾವಿಗೇಶನ್ ಬಳಸಿ ಉದ್ದೇಶಿತ ಸ್ಥಳಗಳಿಗೆ ತೆರಳವೂ ಈ ತಿದ್ದುಪಡಿಯ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆದರೆ ಮ್ಯಾಪ್ ಬಳಕೆ ಮಾಡಿ ಚಾಲನೆ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವಂತೆಯೂ ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.