ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಟೈಮ್ಸ್ ನಿಯತಕಾಲಿಕೆಯ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಗೂಗಲ್ ಸಿಇಒ ಸುಂದರ್ ಪಿಚೈ, ಲಂಡನ್ ಮೂಲದ ಭಾರತೀಯ ಮೂಲದ ವೈದ್ಯ ರವೀಂದ್ರ ಗುಪ್ತಾ, ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ಶಹೀನ್ ಬಾಗ್ನಲ್ಲಿ ಹೋರಾಟಕ್ಕೆ ಕೂತಿದ್ದ ಬಿಲ್ಕಿಸ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಾರ್ಷಿಕ ಪಟ್ಟಿಯಲ್ಲಿ ಈ ವರ್ಷ ಹೆಚ್ಚು ಪ್ರಭಾವ ಬೀರಿದ ಪ್ರವರ್ತಕರು, ಕಲಾವಿದರು, ದಿಗ್ಗಜರು, ನಾಯಕರು ಮತ್ತು ಐಕಾನ್ಗಳು ಇದ್ದಾರೆ.
ಈ ವರ್ಷ 70 ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ, 2017 ರಲ್ಲಿ ವಾರ್ಷಿಕ ಟೈಮ್ ನಿಯತಕಾಲಿಕೆ ಪಟ್ಟಿಯಲ್ಲಿ ಕೊನೆಯ ಬಾರಿಗೆ ಸ್ಥಾನ ಪಡೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಸ್ಥಾನ ಪಡೆದುಕೊಂಡಿದ್ದಾರೆ.
ಮೋದಿಯವರು ಪಟ್ಟಿಯ ʼಲೀಡರ್ʼ ಕೆಟಗರಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.