ಜಮ್ಮು: ಜಮ್ಮುವಿನ ಹಿಮಾಲಯದ ತಪ್ಪಲಲ್ಲಿ ಇರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಬೇಕು ಎನ್ನುವ ಮಹದಾಸೆ ಬಹುತೇಕ ಜನರಲ್ಲಿ ಇರುತ್ತದೆ. ಆದರೆ ಅಲ್ಲಿಗೆ ತೆರಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡಿರುವ ದೇಗುಲ ಮಂಡಳಿಯು ವರ್ಚುವಲ್ ರೀತಿಯಲ್ಲಿ ದೇವಿಯ ದರ್ಶವನ್ನು ಭಕ್ತರಿಗೆ ಮಾಡಿಸಲು ಮುಂದಾಗಿದೆ.
ಮೊಬೈಲ್ ಅಪ್ಲಿಕೇಶನ್ ಅನ್ನು ಆರಂಭಿಸುವ ಯೋಜನೆಯನ್ನು ದೇಗುಲ ಮಂಡಳಿಯು ಹೊಂದಿದ್ದು, ಇದರ ಮೂಲಕ ನಿತ್ಯ ಪವಿತ್ರ ದೇಗುಲದ ಪೂಜಾ ಕೈಂಕರ್ಯಗಳನ್ನು ನೇರ ಪ್ರಸಾರ ಮಾಡಲು ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ ಮೊಬೈಲ್ ಅಪ್ಲಿಕೇಶನ್ ಅಕ್ಟೋಬರ್ 17ರಂದು ನವರಾತ್ರಿಯ ಮೊದಲ ದಿನ ಚಾಲನೆಗೊಳ್ಳುವ ನಿರೀಕ್ಷೆಯಿದೆ.
ಮೊಬೈಲ್ ಆ್ಯಪ್ ಮೂಲಕ ಜಗತ್ತಿನಾದ್ಯಂತದ ಭಕ್ತರು ವೈಷ್ಣೋದೇವಿ ದೇಗುಲದ ಪೂಜಾ ಕೈಂಕರ್ಯಗಳನ್ನು ನೇರವಾಗಿ ವೀಕ್ಷಣೆ ಮಾಡಲು ಸಾಧ್ಯವಾಗಲಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಇದು ಕಾರ್ಯನಿರ್ವಹಿಸಲಿದೆ.
1986 ರಲ್ಲಿ ಆರಂಭಗೊಂಡ ದೇಗುಲ ಮಂಡಳಿಯು, ದೇಗುಲಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ಸುಧಾರಣೆಗಳನ್ನು ಮಾಡಿದೆ. ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲೂ ಅದು ಭಕ್ತಾದಿಗಳಿಗೆ ಅನುಕೂಲವಾಗುವಂತೆ ಪೂಜೆಯ ನೇರ ಪ್ರಸಾರವನ್ನು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.