ಮಾಸ್ಕೋ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ರಷ್ಯಾ ಪ್ರವಾಸದ ವೇಳೆ ಎಕೆ -47 203 ರೈಫಲ್ ತಯಾರಿಕೆಗಾಗಿ ಭಾರತ ಗುರುವಾರ ರಷ್ಯಾದೊಂದಿಗೆ ಪ್ರಮುಖ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭಾರತೀಯ ಸೈನ್ಯಕ್ಕೆ 7,70,000 ಎಕೆ -47 203 ರೈಫಲ್ಗಳ ಅವಶ್ಯಕತೆ ಇದ್ದು, ಅದರಲ್ಲಿ 1,00,000 ಆಮದು ಮಾಡಿಕೊಳ್ಳಲಾಗುವುದು ಮತ್ತು ಉಳಿದವುಗಳನ್ನು ಭಾರತದಲ್ಲಿ ತಯಾರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಎಕೆ -47 203 ಎಕೆ -47 ರೈಫಲ್ನ ಇತ್ತೀಚಿನ ಮತ್ತು ಅತ್ಯಾಧುನಿಕ ಆವೃತ್ತಿಯಾಗಿದ್ದು, ಇದು ಭಾರತೀಯ ಸಣ್ಣ ಶಸ್ತ್ರಾಸ್ತ್ರ ವ್ಯವಸ್ಥೆ (ಐಎನ್ಎಸ್ಎಎಸ್) 5.56×45 ಎಂಎಂ ಆಕ್ರಮಣಕಾರಿ ರೈಫಲ್ ಅನ್ನು ರಿಪ್ಲೇಸ್ ಮಾಡಲಿದೆ.
ರಕ್ಷಣಾ ಸಚಿವಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಎಕೆ 203 ಆಕ್ರಮಣಕಾರಿ ರೈಫಲ್ಗಳ ಉತ್ಪಾದನೆಗಾಗಿ ಭಾರತ-ರಷ್ಯಾದ ಜಂಟಿ ಉದ್ಯಮವನ್ನು ಭಾರತದಲ್ಲಿ ಸ್ಥಾಪಿಸುವ ಚರ್ಚೆಯ ಮುಂಗಡ ಹಂತವನ್ನು ಎರಡೂ ಕಡೆಯವರು ಸ್ವಾಗತಿಸಿದರು, ಈ ರೈಫಲ್ ಇನ್ಫಾಂಟ್ರಿ ಪಡೆಗಳಿಗೆ ಲಭ್ಯವಿರುವ ಅತ್ಯಂತ ಆಧುನಿಕ ಶಸ್ತ್ರಾಸ್ತ್ರಗಳಲ್ಲಿ ಒಂದು ಎಂದು ಇದನ್ನು ಪರಿಗಣಿಸಲಾಗಿದೆ” ಎಂದಿದೆ.
‘ಮೇಕ್-ಇನ್-ಇಂಡಿಯಾ’ ಕಾರ್ಯಕ್ರಮದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ನಮ್ಮ ರಕ್ಷಣಾ ಸಚಿವಾಲಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ರಷ್ಯಾದ ಬದ್ಧತೆಯನ್ನು ಜನರಲ್ ಶೋಯಿಗು ಪುನರುಚ್ಚರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ‘ಮೇಕ್-ಇನ್-ಇಂಡಿಯಾ’ ಕಾರ್ಯಕ್ರಮದಲ್ಲಿ ರಷ್ಯಾದ ರಕ್ಷಣಾ ಉದ್ಯಮವನ್ನು ಮತ್ತಷ್ಟು ತೊಡಗಿಸಿಕೊಳ್ಳಲು ಇದು ಅತ್ಯಂತ ಸಕಾರಾತ್ಮಕ ಆಧಾರವನ್ನು ನೀಡುತ್ತದೆ ಎಂದು ಹೇಳಿಕೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.