ನವದೆಹಲಿ: ಭಾರತೀಯ ಖಗೋಳಶಾಸ್ತ್ರಜ್ಞರು ಬ್ರಹ್ಮಾಂಡದ ಅತ್ಯಂತ ದೂರದ ನಕ್ಷತ್ರಪುಂಜಗಳಲ್ಲಿ ಒಂದನ್ನು ಕಂಡುಹಿಡಿದಿದ್ದಾರೆ. ಈ ದೂರದ ನಕ್ಷತ್ರಪುಂಜ ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷ ದೂರದಲ್ಲಿದೆ ಎಂದು ಅಂದಾಜಿಸಲಾಗಿದೆ.
ಭಾರತೀಯ ಖಗೋಳಶಾಸ್ತ್ರಜ್ಞರ ಈ ಕಾರ್ಯವನ್ನು ನಾಸಾ ಮುಕ್ತಕಂಠದಿಂದ ಅಭಿನಂದಿಸಿದ್ದು, ಈ ಆವಿಷ್ಕಾರವನ್ನು ಮಾನವಕುಲದ ತಿಳುವಳಿಕೆಯನ್ನು ಮತ್ತಷ್ಟು ಶಕ್ತಗೊಳಿಸುವ ಪ್ರಯತ್ನ ಎಂದು ಶ್ಲಾಘಿಸಿದೆ.
“ನಾಸಾವು ಭಾರತೀಯ ಸಂಶೋಧಕರ ಅತ್ಯಾಕರ್ಷಕ ಆವಿಷ್ಕಾರವನ್ನು ಅಭಿನಂದಿಸುತ್ತದೆ” ಎಂದು ನಾಸಾದ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಫೆಲಿಷಿಯಾ ಚೌ ತಿಳಿಸಿದ್ದಾರೆ.
“ವಿಜ್ಞಾನವು ಪ್ರಪಂಚದಾದ್ಯಂತದ ಸಹಯೋಗದ ಪ್ರಯತ್ನವಾಗಿದೆ, ಮತ್ತು ಈ ರೀತಿಯ ಆವಿಷ್ಕಾರಗಳು ನಾವು ಎಲ್ಲಿಂದ ಬರುತ್ತೇವೆ, ಎಲ್ಲಿಗೆ ಹೋಗುತ್ತಿದ್ದೇವೆ ಮತ್ತು ನಾವು ಒಬ್ಬಂಟಿಯೇ ಎಂಬುದರ ಬಗ್ಗೆ ಮಾನವಕುಲದ ತಿಳುವಳಿಕೆಯನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದು ಚೌ ಹೇಳಿದರು.
ಪುಣೆಯ ಇಂಟರ್-ಯೂನಿವರ್ಸಿಟಿ ಸೆಂಟರ್ ಫಾರ್ ಅಸ್ಟ್ರೋನಮಿ ಆಂಡ್ ಅಸ್ಟ್ರೋಫಿಸಿಕ್ಸ್ (ಐಯುಸಿಎಎ)ನ ಡಾ. ಕನಕ್ ಸಾಹ ನೇತೃತ್ವದ ಖಗೋಳಶಾಸ್ತ್ರಜ್ಞರ ತಂಡವು ಎಯುಡಿಎಫ್ಎಸ್ 01 ಎಂಬ ನಕ್ಷತ್ರಪುಂಜವನ್ನು ಕಂಡುಹಿಡಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.