ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಮೊಧೇರದಲ್ಲಿರುವ ಐತಿಹಾಸಿಕ ಸೂರ್ಯ ದೇವಾಲಯದ ಮನಮೋಹಕ ದೃಶ್ಯವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ಸೂರ್ಯ ದೇವಾಲಯವು ಅದ್ಭುತವಾಗಿ ಕಾಣುತ್ತದೆ. ಸುತ್ತಲೂ ಪರಿಶುದ್ಧ ನೀರುಗಳು ಹರಿಯುತ್ತವೆ.
ವಿಡಿಯೋವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, “ಮೊಧೇರದ ಐತಿಹಾಸಿಕ ಸೂರ್ಯ ದೇಗುಲವು ಮಳೆಗಾಲದ ಸಂದರ್ಭದಲ್ಲಿ ಭವ್ಯವಾಗಿ ಕಾಣುತ್ತದೆ” ಎಂದಿದ್ದಾರೆ.
55 ಸೆಕೆಂಡ್ಗಳ ವಿಡಿಯೋವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದು, ದೇಗುಲದ ಮೆಟ್ಟಿಲುಗಳಿಂದ ನೀರು ಹರಿಯುವ ದೃಶ್ಯ ಮನಮೋಹಕವಾಗಿ ಕಾಣುತ್ತಿದೆ.
ಈ ಸೂರ್ಯ ದೇಗುಲವು ಪುಷ್ಪವತಿ ನದಿಯ ತಟದಲ್ಲಿ ಇದ್ದು, ಸೋಲಂಕಿ ರಾಜವಂಶಸ್ಥರು ಇದನ್ನು ನಿರ್ಮಾಣ ಮಾಡಿದ್ದರು ಎಂದು ಗುಜರಾತ್ ಸರ್ಕಾರದ ಪ್ರವಾಸೋದ್ಯಮದ ಅಧಿಕೃತ ವೆಬ್ಸೈಟ್ ಹೇಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.