ನವದೆಹಲಿ: ಮುಂಬರುವ ಐಪಿಎಲ್ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಡ್ರೀಮ್ 11 ಪಡೆದುಕೊಂಡಿದೆ. ಇದಕ್ಕೆ ಸಂಬಂಧಿಸಿದ ಹಕ್ಕುಗಳಿಗಾಗಿ ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್ಫಾರ್ಮ್ ಡ್ರೀಮ್ 11 ಮಂಗಳವಾರ ಬಿಸಿಸಿಐ ಜೊತೆ ರೂ.222 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ.
ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಪ್ರಾರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2020ಕ್ಕೆ ಡ್ರೀಮ್ 11 ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ. ಚೀನಾದ ಫೋನ್ ತಯಾರಕ ವಿವೋ ಅನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
“ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್ಫಾರ್ಮ್ ಡ್ರೀಮ್ 11 ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ರೂ.222 ಕೋಟಿಗಳ ಮೊತ್ತದೊಂದಿಗೆ ಗೆದ್ದುಕೊಂಡಿದೆ” ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. ಡ್ರೀಮ್ 11 ಸಂಸ್ಥೆಯು ನಾಲ್ಕು ತಿಂಗಳು 13 ದಿನಗಳವರೆಗೆ ಹಕ್ಕುಗಳನ್ನು ಹೊಂದಿರುತ್ತದೆ.
ಬಹುರಾಷ್ಟ್ರೀಯ ಕಂಪನಿಯಾದ ಟಾಟಾ ಗ್ರೂಪ್ ಮತ್ತು ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಅನಾಕಾಡೆಮಿ ಸಹ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳಿಗಾಗಿ ಕಣದಲ್ಲಿದ್ದವು, ಆದರೆ ಡ್ರೀಮ್ 11 ಅವುಗಳನ್ನು ಮೀರಿಸಿದೆ.
ಈ ವರ್ಷ ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಐಪಿಎಲ್ ನಡೆಯಲಿದೆ. ವಾರ್ಷಿಕವಾಗಿ ರೂ. 440 ಕೋಟಿ ಪಾವತಿಸುವ ವಿವೊ, ಚೀನಾ-ಭಾರತದ ಗಡಿ ಉದ್ವಿಗ್ನತೆಯಿಂದಾಗಿ ಈ ವರ್ಷ ಶೀರ್ಷಿಕೆ ಪ್ರಾಯೋಜಕತ್ವದಿಂದ ಹೊರಗುಳಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.