ನವದೆಹಲಿ: 2024ರ ಒಲಿಂಪಿಕ್ ಗೇಮ್ಸ್ನ್ನು ಭಾರತದಲ್ಲಿ ಆಯೋಜನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಆಗಮಿಸಲಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ತೋಮಸ್ ಬಾಚ್ ಅವರೊಂದಿಗೆ ಈ ಬಗ್ಗೆ ಮೋದಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ವಿಶ್ವದ ಅತೀ ದೊಡ್ಡ ಕ್ರೀಡಾ ಕಾರ್ಯಕ್ರಮವಾದ ಒಲಿಂಪಿಕ್ಸ್ನ್ನು ಇದುವರೆಗೆ ಭಾರತ ಆಯೋಜನೆ ಮಾಡಿಲ್ಲ. ಇದೀಗ ಅದನ್ನು ಆಯೋಜಿಸಲು ಮೋದಿ ಉತ್ಸುಹುಕತೆ ತೋರಿಸಿದ್ದಾರೆ. ಈಗಾಗಲೇ ಭಾರತದ ಕ್ರೀಡಾ ಕಾರ್ಯದರ್ಶಿ ಅಜಿತ್ ಶರಣ್ ಅವರು ಒಲಿಂಪಿಕ್ ಸಮಿತಿಯ ಅಧಿಕಾರಿಗಳನ್ನು ಭೇಟಿಯಾಗಿ ಈ ಬಗೆಗಿನ ಮಾತುಕತೆಗೆ ಚಾಲನೆ ನೀಡಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಬಾಚ್ ಕೂಡ ಅತಿದೊಡ್ಡ ಅಂತಾರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮದಲ್ಲಿ ಭಾರತ ಪ್ರಮುಖ ಪಾತ್ರವಹಿಸಲಿ ಎಂದು ಬಯಸುತ್ತಿದ್ದಾರೆ. ’1.2 ಬಿಲಿಯನ್ ಜನಸಂಖ್ಯೆ ಹೊಂದಿರುವ ದೇಶವನ್ನು ನಾವು ಹೇಗೆ ನಿರ್ಲಕ್ಷ್ಯ ಮಾಡಲಿ? ಎಂದು ಅವರು ಹೇಳಿದ್ದಾರೆ. ಎ.27ರಂದು ಅವರು ನವದೆಹಲಿಗೆ ಆಗಮಿಸಲಿದ್ದಾರೆ.
ಮೂಲಗಳ ಪ್ರಕಾರ ಅಹ್ಮದಾಬಾದ್ ನಗರದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಮೋದಿ ಯೋಜಿಸಿದ್ದಾರೆ. ಆಧರೆ ಈ ಬಗೆಗೆ ಇದುವರೆಗೆ ಯಾವುದೇ ಮಾತುಕತೆ ಆರಂಭವಾಗಿಲ್ಲ. ಅಕ್ಟೋಬರ್ ೨೦೧೫ ಒಲಿಂಪಿಕ್ಗೆ ಬಿಡ್ ಮಾಡಲು ನಾಮಪತ್ರ ಸಲ್ಲಿಸಲು ಕೊನೆಯ ತಿಂಗಳು. ಮೇ ೨೦೧೬ರಂದು ದೇಶಗಳ ಹೆಸರನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ, ಜುಲೈ 2017ರಂದು ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.
ಮೋದಿ ಪ್ರಯತ್ನದಿಂದಾಗಿ ಭಾರತಕ್ಕೆ ಒಲಿಂಪಿಕ್ ಆಯೋಜಿಸುವ ಸೌಭಾಗ್ಯ ದೊರೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.