ನವದೆಹಲಿ: ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಯೋಗದ ಸಂಶೋಧನೆಗೆ ಬೆಂಬಲ ನೀಡುವ ಸಲುವಾಗಿ ಯುಕೆ ಸರ್ಕಾರ ಭಾರತದಲ್ಲಿ 4 ಮಿಲಿಯನ್ ಪೌಂಡ್ (ಸುಮಾರು 37 ಕೋಟಿ ರೂ) ಇನ್ನೋವೇಶನ್ ಚಾಲೆಂಜ್ ಫಂಡ್ ಅನ್ನು ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ.
ಇನ್ನೋವೇಶನ್ ಚಾಲೆಂಜ್ ಫಂಡ್ ಭಾರತದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಸವಾಲುಗಳಿಗೆ ತಾಂತ್ರಿಕ ಪರಿಹಾರಗಳನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿಪಡಿಸಲು ಉದ್ಯಮ ಮತ್ತು ಅಕಾಡೆಮಿಗಳನ್ನು ಉತ್ತೇಜಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಉಪಕ್ರಮವು ಎರಡು ಪ್ರಮುಖ ಟೆಕ್ ಕ್ಲಸ್ಟರ್ಗಳ ಮೇಲೆ ಕೇಂದ್ರೀಕರಿಸಿದೆ. ಅವುಗಳೆಂದರೆ, ಕರ್ನಾಟಕದ ಕೃತಕ ಬುದ್ಧಿಮತ್ತೆ / ಡೇಟಾ ಮತ್ತು ಮಹಾರಾಷ್ಟ್ರದಲ್ಲಿ ಭವಿಷ್ಯದ ಚಲನಶೀಲತೆ.
ಯಶಸ್ವಿ ಬಿಡ್ಡುದಾರರು ಯುಕೆ ಸೇರಿದಂತೆ ಅಂತರರಾಷ್ಟ್ರೀಯ ಪಾಲುದಾರರನ್ನು ಪಡೆಯಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಸುರಕ್ಷತೆ ಮತ್ತು ಅನುಕೂಲತೆ, ತಂತ್ರಜ್ಞಾನದ ಪ್ರಗತಿ (ಶಕ್ತಿ ಶೇಖರಣಾ ತಂತ್ರಜ್ಞಾನ, ತಾಪಮಾನ-ನಿಯಂತ್ರಿತ ಸಾರಿಗೆ, ಡ್ರೋನ್ ಚಲನಶೀಲತೆ), ಸಂಪರ್ಕ, ಮತ್ತು ಸ್ಮಾರ್ಟ್ ಚಲನಶೀಲತೆ ಸೇರಿದಂತೆ ಮರುಬಳಕೆ ಮತ್ತು ನವೀಕರಣ ಕ್ಷೇತ್ರಗಳಲ್ಲಿ ಚಾಲೆಂಜ್ ಫಂಡ್ ಪ್ರಸ್ತಾಪಗಳನ್ನು ನಿರೀಕ್ಷೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.