ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ನಡೆದ ಗಲಭೆಗಳು ಮುಸ್ಲಿಂ ಸಮುದಾಯಕ್ಕೆ ಒಂದು ಕಪ್ಪುಚುಕ್ಕೆ. ಕಾನೂನಿನ ಚೌಕಟ್ಟಿನಲ್ಲಿ ವಿರೋಧಿಸಬೇಕಿದ್ದ ಘಟನೆಯನ್ನು ಹಿಂಸಾಚಾರದ ಮೂಲಕ, ಗಲಭೆಯ ಮೂಲಕ ವಿರೋಧಿಸಿದ್ದು ಮುಸ್ಲಿಂ ಸಮುದಾಯದ ನೈತಿಕ ಅಧಃಪತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಧಾರ್ಮಿಕ ಗುರುಗಳು, ರಾಜಕೀಯ ನೇತಾರರು ಘಟನೆ ನಡೆಯದಂತೆ ತಡೆಯಬಹುದಿತ್ತು. ಆದರೆ ಗಲಭೆಗೆ ತೆರೆಮರೆಯಿಂದ ಕುಮ್ಮಕ್ಕು ನೀಡಿ ಈಗ ತಮ್ಮವರು ಅಮಾಯಕರು ಎಂಬ ಕೂಗು ಹಬ್ಬಿಸುತ್ತಿದ್ದಾರೆ.
ಧರ್ಮದ ಒಳತಿರುಳನ್ನು ಅರಿಯದ ಮತಾಂಧರಿಂದ ಇಂದು ಸಮಾಜ ನಲುಗಿ ಹೋಗಿದೆ. ಎಲ್ಲವನ್ನೂ ಕೋಮುವಾದ ಎಂಬ ದೃಷ್ಟಿಯಿಂದ ಸ್ವೀಕರಿಸುತ್ತಿರುವುದು ಮುಸ್ಲಿಂ ಸಮುದಾಯಕ್ಕೆ ಅಷ್ಟೇನು ಒಳ್ಳೆಯದಲ್ಲ. ಇದೇನು ಹೊಸತಲ್ಲ ಆದರೆ ಇದಕ್ಕೆ ಅಂತ್ಯವೊಂದರ ಅಗತ್ಯ ಬಹಳ ಇದೆ. ಈ ಹಿಂದೆ ಸಿಎಎ ವಿರೋಧಿ ಪ್ರತಿಭಟನೆಯನ್ನೂ ಕೂಡಾ ನಿರ್ದಿಷ್ಟ ಸಮುದಾಯ ಮುನ್ನಡೆಸಿ ದೇಶದಾದ್ಯಂತ ಗಲಭೆ ಎಬ್ಬಿಸಿ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡಿತ್ತು. ರಾಜ್ಯದ ಮಂಗಳೂರಿನಲ್ಲಂತೂ ಪೊಲೀಸ್ ಠಾಣೆಯನ್ನೇ ದೋಚುವ ಹಂತಕ್ಕೆ ಬಂದಾಗ ಅನಿವಾರ್ಯವಾಗಿ ಗೋಲಿಬಾರ್ ನಡೆದು ಇಬ್ಬರು ಮೃತರಾದರು. ಕಾನೂನಿನಡಿಯಲ್ಲಿ ಹೋರಾಟ ಮಾಡುವ ಆಯ್ಕೆಯನ್ನೇ ತ್ಯಜಿಸಿ ಹಿಂಸಾಚಾರದ ಮೂಲಕ ನ್ಯಾಯ ಪಡೆಯುತ್ತೇವೆ ಎಂಬ ಹುಂಬತನ ಮುಸ್ಲಿಂ ಸಮುದಾಯದಲ್ಲಿ ಬೇರೂರಿದ್ದು ನಮ್ಮ ಸಮಾಜದ ದುರಾದೃಷ್ಟ.
ಹಿಂದೂಗಳು ನಿತ್ಯ ದ್ವಂಸ ಮಾಡುತ್ತಿರಬೇಕಾಗುತ್ತಿತ್ತು….!
ಕಾಂಗ್ರೆಸ್ ಶಾಸಕನ ಸಂಬಂಧಿಯೊಬ್ಬರು ಹಾಕಿದ್ದ ಫೇಸ್ಬುಕ್ ಪೋಸ್ಟ್ ಬೆಂಗಳೂರು ಗಲಭೆಗೆ ಮೂಲ ಕಾರಣ. ಅದು ಕ್ಷಮೆಗೆ ಅನರ್ಹವಾದದ್ದು. ಆದರೆ ಇಂತಹ ಘಟನೆಗಳು ನಿತ್ಯ ನಿರಂತರವಾಗಿ ಹಿಂದೂ ಸಮಾಜದ ಮೇಲೆ ನಡೆದುಕೊಂಡು ಬರುತ್ತಿದೆ. ಒಂದು ವೇಳೆ ಮುಸ್ಲಿಂ ಸಮುದಾಯದ ರೀತಿಯಲ್ಲಿ ಖಂಡಿಸುವ ನಿರ್ಧಾರಕ್ಕೆ ಹಿಂದೂ ಸಮಾಜ ಬರುತ್ತಿದ್ದರೆ ಬಹುಶಃ ನಿತ್ಯ ನಿರಂತರವಾಗಿ ದೊಂಬಿ ಗಲಭೆ ಎಬ್ಬಿಸಬೇಕಾಗುತ್ತಿತ್ತೇನೋ. ಏಕೆಂದರೆ ಅಷ್ಟು ಧಾರ್ಮಿಕ, ವೈಚಾರಿಕ, ಸಾಂಸ್ಕೃತಿಕ ದಾಳಿಗಳು ಹಿಂದೂ ಸಮಾಜದ ಮೇಲಾಗುತ್ತಿರುತ್ತದೆ. ಆದರೆ ಹಿಂದೂ ಸಮಾಜ ಸಂಯಮ ಕಳೆದುಕೊಳ್ಳದೆ ಧರ್ಮ ಮಾರ್ಗದಲ್ಲಿ ನಡೆಯುತ್ತಿದೆ.
ಇದೇ ರೀತಿಯ ಘಟನೆಗೆ ಒಂದೆರಡು ದಿನಗಳ ಹಿಂದೆ ಮಂಗಳೂರು ಸಾಕ್ಷಿಯಾಗಿತ್ತು. ಖಾಸಗಿ ಟಿವಿ ಚಾನೆಲ್ ಒಂದರಲ್ಲಿ ಹಾಸ್ಯ ಕಲಾವಿದರೊಬ್ಬರು ಮಾಡಿದ ಹಾಸ್ಯದ ಎಪಿಸೋಡ್ ಅಸಂಖ್ಯಾತ ಹಿಂದೂಗಳಿಗೆ ನೋವು ತರಿಸಿತ್ತು. ಆದರೆ ತಮ್ಮ ಧರ್ಮ ಪ್ರೇಮವನ್ನು ತೋರಿಸಲು ಹಿಂದೂಗಳು ಅಧರ್ಮದ ಹಾದಿ ತುಳಿಯಲಿಲ್ಲ. ನ್ಯಾಯ ವ್ಯವಸ್ಥೆಯ ಮೊರೆ ಹೋದರು. ಪ್ರಕರಣ ಸುಖಾಂತ್ಯವಾಯಿತು. ಬೆಂಗಳೂರಿನಲ್ಲಿ ಮುಸ್ಲಿಮರು ನಡೆದುಕೊಂಡ ರೀತಿ ನಡೆದುಕೊಂಡಿದ್ದರೆ ಬಹುಶಃ ಮಂಗಳೂರು ರಣರಂಗವಾಗುತ್ತಿತ್ತು.
ಧರ್ಮ ಪ್ರಚಾರಕರನ್ನು ನಿಂದಿಸಿದರು ಎಂಬ ಮಾತ್ರಕ್ಕೆ ರಾತೋರಾತ್ರಿ ಬೆಂಕಿ ಹಚ್ಚಿ ದಾಂಧಲೆ ಎಬ್ಬಿಸಿ, ನಮ್ಮ ಸಹವಾಸಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶ ನೀಡಲು ಹೋಗಿ ಮುಸ್ಲಿಂ ಸಮುದಾಯ ಮತ್ತೊಮ್ಮೆ ಸಮಾಜದೆದುರು ಬೆತ್ತಲಾಯಿತು. ಇಲ್ಲಿ ಮುಸ್ಲಿಂ ಸಮುದಾಯದ ಕೆಲವು ನಿರ್ದಿಷ್ಟ ವ್ಯಕ್ತಿಗಳು, ಸಂಘಟನೆಗಳು ಮಾಡಿದ ತಪ್ಪಿನಿಂದಾಗಿ ಇಂದು ಇಡೀ ಮುಸ್ಲಿಂ ಸಮುದಾಯ ನೋವು ಅನುಭವಿಸುತ್ತಿದೆ. ಕಾಂಗ್ರೆಸ್ ಪಕ್ಷದ ತುಷ್ಟೀಕರಣ, ಓಲೈಕೆ ಮುಸ್ಲಿಂ ಸಮುದಾಯವನ್ನು ದಾರಿತಪಪಿಸುತ್ತಿದೆ ಎನ್ನುವುದೇನು ಗುಪ್ತವಾಗಿ ಉಳಿದಿಲ್ಲ. ಮುಸ್ಲಿಂ ಸಮುದಾಯ ಇದನ್ನೆಲ್ಲ ಮೆಟ್ಟಿನಿಂತು ಧರ್ಮಮಾರ್ಗದಲ್ಲಿ ನಡೆಯುವ ಬದ್ಧತೆ ತೋರಿಸುವುದು ಸದ್ಯದ ಅನಿವಾರ್ಯತೆ.
ಸುಜಿತ್ ರಾಜ್ ಮೀನಾ✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.