ನವದೆಹಲಿ: ಆರೋಗ್ಯ ಸಚಿವಾಲಯದ ಉಪಕ್ರಮ ಇ-ಸಂಜೀವನಿ ಒಪಿಡಿ, ಟೆಲಿಮೆಡಿಸಿನ್ ಸೇವೆಯು 1.58 ಲಕ್ಷ ಆನ್ಲೈನ್ ಕನ್ಸಲ್ಟೇಷನ್ಗಳನ್ನು ನೋಂದಾಯಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಕಳೆದ ನವೆಂಬರ್ನಿಂದ 23 ರಾಜ್ಯಗಳು ಈ ಸೇವೆಯನ್ನು ಪ್ರಾರಂಭಿಸಿದ್ದು, ಇದು ದೇಶದ ಜನಸಂಖ್ಯೆಯ ಶೇಕಡಾ 75 ರಷ್ಟು ವ್ಯಾಪ್ತಿಯನ್ನು ಒಳಗೊಂಡಿದೆ. ಇತರ ರಾಜ್ಯಗಳು ಸೇವೆಯನ್ನು ಹೊರತರುವ ಪ್ರಕ್ರಿಯೆಯಲ್ಲಿವೆ ಎಂದಿದ್ದಾರೆ.
ಇ-ಸಂಜೀವನಿ ಪ್ಲಾಟ್ಫಾರ್ಮ್ ಎರಡು ರೀತಿಯ ಟೆಲಿ-ಕನ್ಸಲ್ಟೇಶನ್ಸ್-ಡಾಕ್ಟರ್-ಟು-ಡಾಕ್ಟರ್ (ಇ ಸಂಜೀವನಿ) ಮತ್ತು ರೋಗಿಯಿಂದ ವೈದ್ಯರಿಗೆ (ಇ ಸಂಜೀವನಿ ಒಪಿಡಿ) ಸೇವೆಯನ್ನು ಶಕ್ತಗೊಳಿಸಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (ಎಬಿ-ಎಚ್ಡಬ್ಲ್ಯೂಸಿ) ಕಾರ್ಯಕ್ರಮದಡಿ ಇ ಸಂಜೀವನಿ ಜಾರಿಗೆ ತರಲಾಗುತ್ತಿದೆ ಎಂದು ಡಾ.ಹರ್ಷವರ್ಧನ್ ಹೇಳಿದ್ದಾರೆ. 2022 ರ ಡಿಸೆಂಬರ್ ವೇಳೆಗೆ ಹಬ್-ಅಂಡ್-ಸ್ಪೋಕ್ ಮಾದರಿಯನ್ನು ಬಳಸಿಕೊಂಡು ಎಲ್ಲಾ 150,000 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸಂಪರ್ಕಿಸಲು ಇದು ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು. ಇಲ್ಲಿಯವರೆಗೆ, 2,800 ವೈದ್ಯರು ಸೇರಿದಂತೆ 12,000 ಆರೋಗ್ಯ ವೃತ್ತಿಪರರಿಗೆ 10 ರಾಜ್ಯಗಳಲ್ಲಿ 3,000 ಕ್ಕೂ ಹೆಚ್ಚು ಎಚ್ಡಬ್ಲ್ಯೂಸಿಗಳ ಮೂಲಕ ರಾಷ್ಟ್ರೀಯ ಇ-ಪ್ಲಾಟ್ಫಾರ್ಮ್ನಲ್ಲಿ ಕನ್ಸಲ್ಟೇಸನ್ ನೀಡಲು ತರಬೇತಿ ನೀಡಲಾಗಿದೆ ಎಂದಿದ್ದಾರೆ.
ಲಾಕ್ಡೌನ್ಗಳ ನಡೆವೆಯೂ ಪ್ರತಿದಿನ ಸುಮಾರು 250 ವೈದ್ಯರು ಮತ್ತು ತಜ್ಞರು ಇಹೆಲ್ತ್ ಸೇವೆಗಳನ್ನು ಒದಗಿಸುತ್ತಿದ್ದಾರೆ ಎಂದು ಅವರು ಹೇಳಿದರು. ಈ ಸೇವೆ ಆಂಡ್ರಾಯ್ಡ್ ಅಪ್ಲಿಕೇಶನ್ಗಳಲ್ಲಿ ಲಭ್ಯವಿದೆ. ಲಾಗ್ ಇನ್ ಮಾಡಿದ ಸುಮಾರು ಐದು ನಿಮಿಷಗಳಲ್ಲಿ ರೋಗಿಯೊಬ್ಬರು ವೈದ್ಯರನ್ನು ಭೇಟಿ ಮಾಡಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.