ಬದುಕು ಸಾಗಿಸಲು ತನ್ನ ಮನೆಯ ಅಡುಗೆ ಮತ್ತು ಕ್ಲೀನಿಂಗ್ ಕೆಲಸಕ್ಕಾಗಿ ಬರುತ್ತಿದ್ದ ಮಹಿಳೆಗೆ, ಸ್ವಂತ ಉದ್ಯೋಗ ಆರಂಭಿಸಲು ನೆರವಾಗುವ ಮೂಲಕ ಆಕೆಯ ಕೈ ರುಚಿ ಜನಸಾಮಾನ್ಯರಿಗೆ ತಲುಪುವಂತೆ ಮಾಡಿ, ಆ ಮೂಲಕ ಆಕೆ ಮತ್ತು ಆಕೆಯ ಮಕ್ಕಳ ಪಾಲಿಗೆ ಬೆಳಕಾಗಿದ್ದಾರೆ ಬೆಂಗಳೂರಿನ ಅಂಕಿತ್ ವೆಂಗುಳೇಲ್ಕರ್. ತಮ್ಮ ಮನೆ ಕೆಲಸಕ್ಕೆ ಬರುವ ಮಹಿಳೆಯ ಕೈ ರುಚಿಯ ಬಗ್ಗೆ ಟ್ವೀಟರ್ನಲ್ಲಿ ಪ್ರಚಾರ ಕೊಟ್ಟು ಸದ್ಯ ಆಕೆಯನ್ನು ಬೆಂಗಳೂರಿಗೆ ಪರಿಚಯಿಸುವ ಮೂಲಕ ಅಂಕಿತ್ ಉತ್ತಮ ಕೆಲಸವನ್ನು ಮಾಡಿದ್ದಾರೆ. ಇವರ ಈ ಕೆಲಸಕ್ಕೆ ಚೆಫ್ ವಿಕಾಸ್ ಖನ್ನಾ ಸೇರಿದಂತೆ ಇನ್ನೂ ಹಲವು ನೆಟ್ಟಿಗರು ಭೇಷ್ ಎಂದಿದ್ದಾರೆ.
ಅಂದ ಹಾಗೆ ಅವರ ಹೆಸರು ಸರೋಜ. ಅಂಕಿತ್ ಮನೆಗೆ ಮನೆ ಕೆಲಸಕ್ಕೆ ಅಂದರೆ ಅಡುಗೆ ಮತ್ತು ಕ್ಲೀನಿಂಗ್ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ. ಆಕೆಯ ಅಡುಗೆಯ ಸವಿಗೆ ಮನಸೋತ ಅಂಕಿತ್ ಆಕೆಯನ್ನು ಟ್ವಿಟರ್ ಮೂಲಕ ಜನರಿಗೆ ಪರಿಚಯ ಮಾಡಿಸಲು ಮುಂದಾಗುತ್ತಾರೆ. ಬೆಂಗಳೂರಿನ ಎಚ್ಎಸ್ಆರ್ ಲೇ ಔಟ್ನಲ್ಲಿ ಮನೆಯೂಟ, ಉಪಹಾರದ ಅಗತ್ಯವಿರುವವರು ಅಂಕಿತ್ ಅವರನ್ನು ಸಂಪರ್ಕಿಸುವ ಮೂಲಕ ಸರೋಜಮ್ಮನ ಕೈರುಚಿಯ ಸವಿಯನ್ನು ಉಣ್ಣುವ ಅವಕಾಶವನ್ನೂ ಮಾಡಿಕೊಡುವ ನಿಟ್ಟಿನಲ್ಲಿ ಅಂಕಿತ್ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಆ ಮೂಲಕ ಸರೋಜಮ್ಮನಿಗೆ ಆದಾಯ ಹೆಚ್ಚುವುದಕ್ಕೆ ಪೂರಕವಾದ ಸಹಾಯವನ್ನು ಕಲ್ಪಿಸಿಕೊಟ್ಟಿದ್ದಾರೆ.
ತಮ್ಮ ಪತಿಯ ಜೊತೆಗೆ ಮಂಗಮ್ಮನ ಪಾಳ್ಯದಲ್ಲಿ ಗಂಡನ ಜೊತೆಗೆ ಸಣ್ಣದೊಂದು ಕ್ಯಾಂಟೀನ್ ನಡೆಸುತ್ತಿದ್ದ ಸರೋಜ ಅವರು, ತಮ್ಮ ಗಂಡ ಮೃತಪಟ್ಟ ಬಳಿಕ ಈ ಉದ್ಯಮವನ್ನು ನಿಲ್ಲಿಸಿ, ಅವರಿವರ ಮನೆಯಲ್ಲಿ ಅಡುಗೆ, ಸ್ವಚ್ಛತೆಯ ಕೆಲಸವನ್ನು ಮಾಡುತ್ತಾ ತಮ್ಮ ಮೂವರು ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ಅಂಕಿತ್ ಮನೆಯಲ್ಲಿಯೂ ಸರೋಜಮ್ಮ ಇದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸರೋಜಮ್ಮ ಅವರಿಗೆ ಅಂಕಿತ್ ಫುಡ್ ಡೆಲಿವರಿ ವಿಚಾರದಲ್ಲಿಯೂ ಸಹಾಯ ಮಾಡುತ್ತಿದ್ದಾರೆ. ಅವರ ಕೈ ರುಚಿಯನ್ನು ಹೆಚ್ಚು ಜನರಿಗೆ ತಲುಪಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸರೋಜ ಅವರ ಅಡುಗೆಯ ಬಗ್ಗೆ, ಅವರು ತಯಾರಿಸುವ ವಿವಿಧ ಖಾದ್ಯಗಳ ಬಗೆಗೆ ಬರೆದುಕೊಳ್ಳುತ್ತಾರೆ. ಸರೋಜ ಅವರಿಂದ ಆಹಾರ ಪಡೆದುಕೊಳ್ಳಲು ಬಯಸುವವರು ಹೇಗೆ ಹಣ ಪಾವತಿಸಬೇಕು?, ಆಹಾರವನ್ನು ತಲುಪಿಸಿಕೊಳ್ಳುವ ಬಗೆ ಹೇಗೆ ಎಂಬುದರ ಬಗೆಗೂ ಅಂಕಿತ್ ಮಾಹಿತಿ ನೀಡುವ ಮೂಲಕ, ತಮ್ಮ ಮನೆ ಕೆಲಸದ ಮಹಿಳೆಗೆ ಹೆಚ್ಚುವರಿ ಆದಾಯ ಗಳಿಸುವುದಕ್ಕೆ ಪೂರಕ ವ್ಯವವಸ್ಥೆಯನ್ನು ಮಾಡಿಕೊಡುತ್ತಿದ್ದಾರೆ.
ಕಳೆದ ಕೆರವು ದಿನಗಳಿಂದ ಸರೋಜ ಮತ್ತು ಅಂಕಿತ್ ಈ ಹೊಸ ಆಹಾರೋದ್ಯಮವನ್ನು ಆರಂಭ ಮಾಡಿದ್ದು, ಇದಕ್ಕೆ ನೆಟ್ಟಿಗರಿಂದಲೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸರೋಜಮ್ಮನ ಮಂಗಳೂರು ಶೈಲಿಯ ಏಡಿಯಿಂದ ತಯಾರಿಸಲಾದ ಖಾದ್ಯಕ್ಕೆ ಸುಮಾರು 10 ಮಂದಿ ಗ್ರಾಹಕರು ದೊರಕಿದ್ದು, 300 ರೂ. ಗಳಂತೆ ಮಾರಾಟವಾಗಿದೆ ಎಂದೂ ಅಂಕಿತ್ ಟ್ವೀಟ್ ಮಾಡಿದ್ದಾರೆ. ಇನ್ನು ಸರೋಜ ಅವರಿಗೆ ಬದುಕು ರೂಪಿಸಿಕೊಳ್ಳಲು ಸಹಕರಿಸಿದ ಅಂಕಿತ್ಗೂ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ. ಖ್ಯಾತ ಚೆಫ್ ವಿಕಾಸ್ ಖನ್ನಾ ಅವರು ಸರೋಜ ಮತ್ತು ಅಂಕಿತ್ ಅವರ ಈ ಹೊಸ ವ್ಯಾಪಾರ ಕ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದು, ಅಂಕಿತ್ ಕಾರ್ಯ ಮಾದರಿ ಎಂದು ತಿಳಿಸಿದ್ದಾರೆ.
ಬದುಕುವುದು ಸುಲಭ. ಆದರೆ ನಾವು ಬದುಕುವ ಜೊತೆಗೆ ಇನ್ನೊಬ್ಬರಿಗೆ ಬದುಕು ನಡೆಸುವುದಕ್ಕೂ ಪೂರಕ ಅವಕಾಶಗಳನ್ನು, ನಮ್ಮ ಕೈಲಾದ ಸಹಾಯವನ್ನು ಮಾಡಿದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ. ಕಷ್ಟದಲ್ಲಿರುವವರಿಗೆ ನೆಮ್ಮದಿಯ ಜೀವನ ಕಂಡುಕೊಳ್ಳುವುದಕ್ಕಿರುವ ಸಾಧ್ಯತೆಗಳನ್ನು ನಮಗೆ ತಿಳಿದಷ್ಟರ ಮಟ್ಟಿಗೆ ನಾವು ತೋರಿಸಿಕೊಟ್ಟೆವೆಂದಾದಲ್ಲಿ ಸಮಾಜದಲ್ಲಿ ನಾವು ಇತರರಿಗಿಂತ ಭಿನ್ನವಾಗಿ ಬಿಡುತ್ತೇವೆ. ಜೊತೆಗೆ ಇನ್ನೊಂದಷ್ಟು ಜನರಿಗೆ ಮಾದರಿಗಳಾಗಿ ಬಿಡುತ್ತೇವೆ ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ ಅಂಕಿತ್.
🦀🦀🦀
Who would like to eat some delicious home cooked Mangalore Crab curry?
I’m helping my cook Saroj Didi start a food business. Your support would mean the world.
₹300 for a portion. DM me if you’re in Bangalore and want some.
Delivery charges would be as per @DunzoCare pic.twitter.com/jFQ5RDNQFB— Gadgetwala (@ankitv) July 24, 2020
A thread on Saroj Didi. She's 47. Has 3 kids. Her husband & she used to run a small eating joint in Mangammanapalya. When her husband passed away, she shut down the business to look after her kids and raise them by doing housework.
She's fluent in Kannada, Hindi, English. pic.twitter.com/zyCS76yoOD— Gadgetwala (@ankitv) July 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.