
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾವೊಂದು ತೆರೆಗೆ ಬರಲು ಸಿದ್ಧತೆ ನಡೆಸಿದೆ. ಮಲಯಾಳಂ ನಟ ಉನ್ನಿ ಮುಕುಂದನ್ ನಾಯಕನಾಗಿ ಇದರಲ್ಲಿ ನಟಿಸಲಿದ್ದಾರೆ. ಮೋದಿ ಅವರ 75 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ʼಮಾ ವಂದೇʼ ಎಂಬ ಹೆಸರಿನ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ಕ್ರಾಂತಿ ಕುಮಾರ್ ಸಿಎಚ್ ಬರೆದು ನಿರ್ದೇಶಿಸಲಿರುವ ಈ ಸಿನಿಮಾವನ್ನು ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೀರ್ ರೆಡ್ಡಿ ಎಂ ನಿರ್ಮಿಸುತ್ತಿದ್ದಾರೆ. ಪ್ಯಾನ್-ಇಂಡಿಯಾ ಚಲನಚಿತ್ರವಾಗಿ ಬಿಡುಗಡೆಯಾಗಲಿರುವ ಇದು ಮಲಯಾಳಂ, ಹಿಂದಿ, ಕನ್ನಡ, ತೆಲುಗು ಮತ್ತು ಗುಜರಾತಿ ಸೇರಿದಂತೆ ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ, ಜೊತೆಗೆ ಇಂಗ್ಲಿಷ್ ಆವೃತ್ತಿಯೂ ಬಿಡುಗಡೆಯಾಗಲಿದೆ. ಇದರ ಕಥೆಯು ಮೋದಿ ಅವರ ಬಾಲ್ಯದಿಂದ ರಾಷ್ಟ್ರೀಯ ನಾಯಕನಾಗಿ ಅವರ ಉದಯದವರೆಗಿನ ಪ್ರಯಾಣವನ್ನು ತೆರೆ ಮೇಲೆ ಮೂಡಿಸಲಿದೆ, ತಾಯಿ ಹೀರಾಬೆನ್ ಅವರೊಂದಿಗಿನ ಮೋದಿ ಅವರ ಆಳವಾದ ಬಾಂಧವ್ಯದ ಮೇಲೆ ಈ ಸಿನಿಮಾ ವಿಶೇಷ ಗಮನ ಹರಿಸುತ್ತದೆ.
“ಅಹಮದಾಬಾದ್ನಲ್ಲಿ ಬೆಳೆದ ನನಗೆ ಮೊದಲು ನನ್ನ ಬಾಲ್ಯದಲ್ಲಿ ಮೋದಿ ಮುಖ್ಯಮಂತ್ರಿ ಎಂದು ತಿಳಿದಿತ್ತು. ವರ್ಷಗಳ ನಂತರ, ಏಪ್ರಿಲ್ 2023 ರಲ್ಲಿ, ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಭಾಗ್ಯ ಸಿಕ್ಕಿತು, ಆ ಕ್ಷಣ ನನ್ನ ಮೇಲೆ ಅಳಿಸಲಾಗದ ಗುರುತು ಮೂಡಿಸಿತು” ಎಂದು ನಟ ಉನ್ನಿ ಮುಕುಂದನ್ ಹೇಳಿದ್ದಾರೆ. ಈ ಪಾತ್ರವನ್ನು ಸ್ಪೂರ್ತಿದಾಯಕ ಎಂದು ಅವರು ಬಣ್ಣಿಸಿದ್ದಾರೆ.
A man’s story that rises beyond battles… to become a revolution for the ages 💥💥#MaaVande it is ❤️
Wishing the Honourable Prime Minister @Narendramodi Ji a very Happy Birthday ❤️🔥❤️🔥
May glory be revived and brighter things await 🙌🏼@silvercast_prod @Iamunnimukundan… pic.twitter.com/QWvwr1GaoA
— Unni Mukundan (@Iamunnimukundan) September 17, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



