ವಾಷಿಂಗ್ಟನ್: 2050ರ ವೇಳೆ ಭಾರತ ಇಂಡೋನೇಶಿಯಾವನ್ನು ಹಿಂದಿಕ್ಕೆ ಜಗತ್ತಿನ ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ ದೇಶವಾಗಲಿದೆ. ಅಂತೆಯೇ ಹಿಂದೂಗಳು ಜಗತ್ತಿನ 3ನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಲಿದ್ದಾರೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.
ಪ್ಯೂ ರಿಸರ್ಚ್ ಸೆಂಟರ್ನ ಧಾರ್ಮಿಕ ಅಧ್ಯಯನದ ದಾಖಲೆಗಳು ಗುರುವಾರ ಬಿಡುಗಡೆಗೊಂಡಿದ್ದು, ಇದರ ಪ್ರಕಾರ 2050ರ ವೇಳೆ ಹಿಂದೂ ಜನಸಂಖ್ಯೆ ಜಗತ್ತಿನಾದ್ಯಂತ ಶೇ.34ರಷ್ಟು ಏರಿಕೆಯಾಗಲಿದ್ದು, ಪ್ರಸ್ತುತ ಇರುವ 1 ಬಿಲಿಯನ್ಗಿಂತ 1.4 ಬಿಲಿಯನ್ಗೆ ಏರಲಿದೆ.
ಪ್ರಸ್ತುತ ಯಾವ ಧರ್ಮಕ್ಕೂ ಸೇರದ(ನಾಸ್ತಿಕ)ದವರ ಜನಸಂಖ್ಯೆ 3ನೇ ಸ್ಥಾನದಲ್ಲಿತ್ತು. 2050ರಲ್ಲಿ ಇವರ ಜನಸಂಖ್ಯೆಯನ್ನು ಹಿಂದೂಗಳು ಮೀರಿಸಲಿದ್ದಾರೆ. ಪ್ರಸ್ತುತ 2050ರಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇ.14.9ರಷ್ಟು ಹಿಂದೂಗಳಿರಲಿದ್ದಾರೆ, 13.2ರಷ್ಟು ನಾಸ್ತಿಕರಿರಲಿದ್ದಾರೆ.
ಭಾರತ ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಿಯೇ ಉಳಿಯಲಿದೆ. ಆದರೆ ಇದು ವಿಶ್ವದಲ್ಲೇ ಅತ್ಯಧಿಕ ಮುಸ್ಲಿಂ ಧರ್ಮಿಯರನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ. ಮುಂದಿನ ಹಲವು ವರ್ಷದವರೆಗೂ ಜಗತ್ತಿನ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರು ಮೊದಲ ಸ್ಥಾನದಲ್ಲಿರಲಿದ್ದಾರೆ. ಆದರೆ ಮುಸ್ಲಿಂ ಜನಸಂಖ್ಯೆಯ ಇತರ ಎಲ್ಲಾ ಧರ್ಮಿಯರಿಗಿಂತಲೂ ಶೀಘ್ರಗತಿಯಲ್ಲಿ ಏರುತ್ತಿದೆ. 2050ರಲ್ಲಿ ಕ್ರಿಶ್ಚಿಯನ್ ಜನಸಂಖ್ಯೆಯ ಹತ್ತಿರ ಹತ್ತಿರಕ್ಕೆ ಮುಸ್ಲಿಮರು ಬರಲಿದ್ದಾರೆ.
ಯುರೋಪ್ನಲ್ಲೂ ಮುಸ್ಲಿಮರ ಜನಸಂಖ್ಯೆ ಏರಲಿದೆ, 2050ರಲ್ಲಿ ಶೇ.10ರಷ್ಟು ಮುಸ್ಲಿಮರಿರಲಿದ್ದಾರೆ. ಹಿಂದೂಗಳ ಸಂಖ್ಯೆಯೂ ಯುರೋಪ್ನಲ್ಲಿ ಏರಿಕೆಯಾಗಲಿದೆ. ಪ್ರಸ್ತುತ ಇಲ್ಲಿ ಹಿಂದೂಗಳು ಶೇ.0.2ರಷ್ಟಿದ್ದು, 2050ರ ವೇಳೆಗೆ 0.4ರಷ್ಟಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.