ನವದೆಹಲಿ: ರಕ್ಷಾಬಂಧನ ಹಬ್ಬವು ಸಮೀಪದಲ್ಲಿದೆ ಮತ್ತು ಜನರು ತಮ್ಮದೇ ಆದ ಮಟ್ಟದಲ್ಲಿ ಹಬ್ಬಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ರಕ್ಷಾಬಂಧನ ಹಬ್ಬವನ್ನು ಈ ಬಾರಿ ಆಗಸ್ಟ್ 3, 2020 ರಂದು ಆಚರಿಸಲಾಗುತ್ತಿದೆ. ಈ ಬಾರಿ ರಕ್ಷಾಬಂಧನದಂದು ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ಭಾರತೀಯರು ಕೈಗೊಂಡಿದ್ದಾರೆ. ಇದಕ್ಕೆ ಸಿದ್ಧತೆ ಮಧ್ಯಪ್ರದೇಶದ ಇಂಧೋರ್ನಲ್ಲಿ ಕಂಡುಬಂದಿದೆ. ಅಲ್ಲಿ ದೇಶೀಯ ರಾಖಿಯನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ.
ಚೀನಾದಿಂದ ಆಮದು ಮಾಡಿದ ವಸ್ತುಗಳನ್ನು ಬಹಿಷ್ಕರಿಸುವ ಭಾವನೆ ಇಂಧೋರ್ನ ಸ್ಥಳೀಯರಲ್ಲಿಯೂ ಸ್ಪಷ್ಟವಾಗಿ ಕಾಣುತ್ತಿದೆ. ಇಂಧೋರ್ ಬಿಜೆಪಿ ಸಂಸದ ಶಂಕರ್ ಲಾಲ್ವಾನಿಯ ಅವರು ಈ ವಿಷಯದಲ್ಲಿ ಜನರಿಗೆ ದೊಡ್ಡ ಸಹಕಾರವನ್ನು ನೀಡುತ್ತಿದ್ದಾರೆ. ರಕ್ಷಾಬಂಧನ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಎನ್ಜಿಒಗಳ ಮೂಲಕ ಒಂದು ಲಕ್ಷ ಸ್ಥಳೀಯ ರಾಖಿಯನ್ನು ತಯಾರಿಸುತ್ತಿದ್ದೇವೆ ಎಂದು ಲಾಲ್ವಾನಿ ಹೇಳಿದ್ದಾರೆ.
22 ಎನ್ಜಿಒಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ರಾಖಿ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಸಂಸದ ಶಂಕರ್ ಲಾಲ್ವಾನಿ, “ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವಂತೆ ಪ್ರಧಾನಿ ಮೋದಿಯವರ ಮನವಿಯ ಹಿನ್ನಲೆಯಲ್ಲಿ, ನಗರದ 22 ಎನ್ಜಿಒಗಳಿಗೆ ಸಂಬಂಧಿಸಿದ ಮಹಿಳೆಯರ ಸಹಾಯದಿಂದ ನಾವು ಒಂದು ಲಕ್ಷ ಸ್ಥಳೀಯ ರಾಖಿಗಳನ್ನುತಯಾರಿಸುತ್ತಿದ್ದೇವೆ, ಇದರಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ನಾವು ಚೀನಿಯರಿಗೆ ಸವಾಲೊಡ್ಡಬಹುದು. ಸ್ಥಳೀಯ ತಯಾರಕರು ರಾಖಿ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ಇದು ಚೀನಾವನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ಇಂದೋರ್ ಜನರ ಉತ್ಸಾಹವನ್ನು ಬಲಪಡಿಸುತ್ತದೆ.
ಮಾಹಿತಿಯ ಪ್ರಕಾರ, ರಾಖಿ ಮಾರಾಟದಿಂದ ಸಂಗ್ರಹಿಸಿದ ಮೊತ್ತವನ್ನು ಎನ್ಜಿಓಗಳಿಗೆ ನೀಡಲಾಗುತ್ತದೆ.
Madhya Pradesh: Women in Indore make rakhis using traditional items for Rakshabandhan. BJP MP Shankar Lalwani says,"In our campaign, over 1 lakh rakhis are being made at 22 centers. 21,000 rakhis will be sent to soldiers. They want to send their rakhis to PM,Home Min&Defence Min" pic.twitter.com/AT8vgRbeGW
— ANI (@ANI) July 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.