ನವದೆಹಲಿ: ಲಾಕ್ಡೌನ್ ಸಂದರ್ಭದಲ್ಲಿ ವಲಸಿಗರನ್ನು ಅವರ ತವರು ಸೇರಿಸಲು ಅವಿರತವಾಗಿ ಶ್ರಮಿಸಿದ ನಟ ಸೋನು ಸೂದ್ ಅವರು ಮತ್ತೊಂದು ಮಹತ್ಕಾರ್ಯವನ್ನು ಆರಂಭಿಸಿದ್ದಾರೆ. ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಹುಡುಕಲು ವಲಸಿಗರಿಗೆ ಸಹಾಯ ಮಾಡಲು ‘ಪ್ರವಾಸಿ ರೋಜ್ಗಾರ್’ ಎಂಬ ಉಚಿತ ಆನ್ಲೈನ್ ವೇದಿಕೆಯನ್ನು ಪ್ರಾರಂಭಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ವಲಸಿಗರು ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡುವಲ್ಲಿ ಅವರು ಮಾಡಿದ ಕೆಲಸಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಸೋನು ಸೂದ್ ಗಮನ ಸೆಳೆದಿದ್ದರು. ಇದೀಗ ಅವರಿಗೆ ಉದ್ಯೋಗವನ್ನು ಹುಡುಕಲು ಅಗತ್ಯವಿರುವ ಎಲ್ಲ ಮಾಹಿತಿ ಮತ್ತು ಸರಿಯಾದ ಸಂಪರ್ಕಗಳನ್ನು ಒದಗಿಸುವ ಅಪ್ಲಿಕೇಶನ್ ಅನ್ನು ಅವರು ಆರಂಭಿಸುವ ಮೂಲಕ ಮತ್ತೊಮ್ಮೆ ವಲಸಿಗರ ಪಾಲಿಗೆ ನಾಯಕನಾಗಿ ಹೊರಹೊಮ್ಮಿದ್ದಾರೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ಅವರ ಈ ಆನ್ಲೈನ್ ಪ್ಲಾಟ್ಫಾರ್ಮ್ ನಿರ್ಮಾಣ, ಉಡುಪು, ಆರೋಗ್ಯ ರಕ್ಷಣೆ, ಎಂಜಿನಿಯರಿಂಗ್, ಬಿಪಿಓಗಳು, ಭದ್ರತೆ, ಆಟೋಮೊಬೈಲ್, ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಿಗೆ ಸಂಬಂಧಿಸಿದ 500 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳನ್ನು ಒಳಗೊಂಡಿದ್ದು, ಉದ್ಯೋಗಾವಕಾಶಗಳನ್ನು ನೀಡುತ್ತದೆ. ವೇದಿಕೆಯು ಸ್ಪೋಕನ್ ಇಂಗ್ಲಿಷ್ನಂತಹ ನಿರ್ದಿಷ್ಟ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಸಹ ನೀಡಲಿದೆ.
ಈ ಅಪ್ಲಿಕೇಶನ್ ಸಮಗ್ರ ಅನುಭವವನ್ನು ಒದಗಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಕಳೆದ ಕೆಲವು ತಿಂಗಳುಗಳಿಂದ ಯುವಕರ ಕೌಶಲ್ಯ ಮತ್ತು ನಿಯೋಜನೆಯಲ್ಲಿ ತೊಡಗಿರುವ ಸಂಸ್ಥೆಗಳೊಂದಿಗೆ ಸಾಕಷ್ಟು ಯೋಜನೆ ಮತ್ತು ಸಮಾಲೋಚನೆ ನಡೆದಿದೆ ಎಂದು ನಟ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.