ನವದೆಹಲಿ: ಜಾರ್ಖಾಂಡ್ನ ಗಿರಿಧಿಹ್ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಹಿರಿಯ ನಾಯಕನನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಭಾರೀ ಪ್ರಮಾಣದ ಹಣವನ್ನು ಗುತ್ತಿಗೆದಾರರಿಂದ ವಸೂಲಿ ಮಾಡಿಕೊಂಡ ಆರೋಪ ಈತನ ಮೇಲಿದೆ.
ಬಂಧಿತ ನಕ್ಸಲ್ನನ್ನು 37 ರ್ಷದ ಸುನೀಲ್ ಮುನ್ಜೀ ಎಂದು ಗುರುತಿಸಲಾಗಿದೆ. ಈತ ನಕ್ಸಲರ ಬಿಹಾರ್-ಜಾರ್ಖಾಂಡ್ ಸ್ಪೆಷಲ್ ಏರಿಯಾ ಕಮಿಟಿಯ ಮುಖಂಡನಾಗಿದ್ದ ಎಂದು ಹೇಳಲಾಗಿದೆ. ಈತನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧನಕ್ಕೆ ಒಳಪಡಿಸಲಾಗಿದೆ.
ಸಿಪಿಐ (ಮಾವೋವಾದಿ) ಮನೋಜ್ ಕುಮಾರ್ ಎಂಬಾತನಿಗೆ ಈತ 6 ಲಕ್ಷ ರೂಪಾಯಿಗಳನ್ನು ಮತ್ತು ಇತರ ಅಕ್ರಮ ವಸ್ತುಗಳನ್ನು ನೀಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. 2018ರಲ್ಲಿ ನಡೆದಿದ್ದ ಈ ಪ್ರಕರಣವನ್ನು ಮರು ತೆರೆದು ತನಿಖೆ ನಡೆಸುತ್ತಿದ್ದ ವೇಳೆ ಮನ್ಜೀ ತಪ್ಪಿತಸ್ಥ ಎಂದು ಸಾಬೀತಾಗಿತ್ತು.
“ಈತ ಗಿರಿಡಿಹ್ನ ಪರಸ್ನಾಥ್ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಬಹಳ ಸಕ್ರಿಯರಾಗಿದ್ದ ಮತ್ತು ಆ ಪ್ರದೇಶದಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿರುವ ಗುತ್ತಿಗೆದಾರರಿಂದ ಭಾರಿ ಪ್ರಮಾಣದ ಹಣ ಸಂಗ್ರಹಿಸುವಲ್ಲಿ ಇವನು ಪ್ರಮುಖ ಪಾತ್ರ ವಹಿಸಿದ್ದ” ಎಂದು ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.