ನವದೆಹಲಿ: ಕೊರೋನಾ ಕಾರಣದಿಂದಾಗಿ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಐಟಿ ಕಂಪೆನಿಗಳಿಗೆ, ಬಿಪಿಒಗಳಿಗೆ ನೀಡಲಾಗಿದ್ದ ಸೌಲಭ್ಯವನ್ನು ಡಿಸೆಂಬರ್ 31 ರ ವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿದೆ.
ಈ ಹಿಂದೆ ಜುಲೈ ಅಂತ್ಯದವರೆಗೂ ಐಟಿ ಉದ್ಯೋಗಿಗಳು, ಬಿಪಿಒ ಉದ್ಯೋಗಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುವ ಮೂಲಕ ಕೊರೋನಾದಿಂದ ರಕ್ಷಿಸಿಕೊಳ್ಳುವುದಕ್ಕೆ ಅವಕಾಶವನ್ನು ನೀಡಲಾಗಿತ್ತು. ಆದರೆ ಇದೀಗ ಕೊರೋನಾ ಹರಡುತ್ತಿರುವ ವೇಗವನ್ನು ಗಮನಿಸಿಕೊಂಡು ಇದೀಗ ಡಿಸೆಂಬರ್ 31 ರ ವರೆಗೂ ಈ ಅವಕಾಶವನ್ನು ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇನ್ನು ಈ ಬಗ್ಗೆ ಟ್ವೀಟರ್ ಮೂಲಕ ಟೆಲಿಕಾಂ ಇಲಾಖೆಯೂ ಡಿಸೆಂಬರ್ 31 ,2020 ವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸುವ ಅವಕಾಶವನ್ನು ಸೇವಾ ಪೂರೈಕೆದಾರರಿಗೆ ಷರತ್ತು ಮತ್ತು ನಿಬಂಧನೆಗಳ ಸಡಿಲಿಕೆಯೊಂದಿಗೆ ವಿಸ್ತರಣೆ ಮಾಡಲಾಗಿರುವುದಾಗಿಯೂ ತಿಳಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಐಟಿ ಉದ್ಯೋಗಿಗಳಲ್ಲಿ 85% ದಷ್ಟು ಜನರು ವರ್ಕ್ ಫ್ರಂ ಹೋಂ ಪದ್ದತಿಯನ್ನೇ ಅನುಸರಿಸುತ್ತಿದ್ದು, ಈ ಅವಧಿಯನ್ನು ವರ್ಷಾಂತ್ಯದವರೆಗೆ ಮುಂದುವರೆಸುವಂತೆಯೂ ಕೇಂದ್ರ ಸರ್ಕಾರ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.