ನವದೆಹಲಿ: ನರೇಂದ್ರ ಮೋದಿ ಭಾರತದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಅಮೆರಿಕಾ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಉತ್ತಮವಾಗಿದೆ. ಸದ್ಯ ಅಮೆರಿಕಾ ಜತೆಗಿನ ಬಾಂಧವ್ಯವನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದ್ದು, ಭಾರತದ ಪಾಲಿನ ಕಚ್ಛಾತೈಲವನ್ನು ಅಮೆರಿಕಾದ ಬಂಕರುಗಳಲ್ಲಿಯೇ ದಾಸ್ತಾನಿಡಲು ಮುಂದಾಗಿದೆ.
ಇದಕ್ಕೆ ಸಂಬಂಧಿಸಿದಂತೆ ದೇಶದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಅಮೆರಿಕದ ಇಂಧನ ಸಚಿವ ಡ್ಯಾನ್ ಬ್ರೌನ್ಲಿಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಿದ್ದಾರೆ.
ಸದ್ಯ ಅಂತರರಾಷ್ಟ್ರೀಯ ಕಚ್ಛಾತೈಲ ಮಾರುಕಟ್ಟೆಯಲ್ಲಿ ತೈಲ ದರ ಕಡಿಮೆಯಾಗಿದೆ. ಇದನ್ನು ಖರೀದಿಸಿ ಅಮೆರಿಕಾದ ಸಂಗ್ರಹಾಲಯಗಳಲ್ಲಿ ದಾಸ್ತಾನಿಟ್ಟರೆ, ಮುಂದೊಮ್ಮೆ ತೈಲ ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ಅಥವಾ ಮುಂದೊಮ್ಮೆ ತೈಲ ಬೆಲೆ ಏರಿಕೆಯಾದಲ್ಲಿ ದಾಸ್ತಾನು ಮಾಡಲಾದ ತೈಲವನ್ನು ಬಳಕೆ ಮಾಡಬಹುದು ಎಂಬ ಮುಂದಾಲೋಚನೆಯನ್ನು ಭಾರತ ಮಾಡಿದೆ.
ಭಾರತದಲ್ಲಿ ವಿಶಾಖಪಟ್ಟಣ, ಮಂಗಳೂರು ಮತ್ತು ಪಾದೂರಿನ ಅಂಡರ್ ಗ್ರೌಂಡ್ ಸ್ಟೋರೇಜ್ಗಳಲ್ಲಿ 9.5 ದಿನಕ್ಕೆ ಬಳಸಬಹುದಾದಷ್ಟು 5.33 ದಶಲಕ್ಷ ಟನ್ಗಳಷ್ಟು ಕಚ್ಛಾತೈಲ ಸಂಗ್ರಹ ವ್ಯವಸ್ಥೆ ಹೊಂದಿದೆ. ಒಡಿಶಾ ಮತ್ತು ಪಾದೂರಿನಲ್ಲಿ ಹೊಸ ಸಂಗ್ರಹಾಲಯಗಳ ನಿರ್ಮಾಣಕ್ಕೂ ಅನುಮತಿ ನೀಡಲಾಗಿದೆ. ಇವೆಲ್ಲದರ ಜೊತೆಗೆ ಭಾರತ ಅಮೆರಿಕಾದಲ್ಲಿಯೂ ಕಚ್ಛಾತೈಲ ದಾಸ್ತಾನು ಮಾಡಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.