ನವದೆಹಲಿ: ಜುಲೈ 29ರಂದು ಅಂಬಾಲಾ ವಾಯುನೆಲೆಯಲ್ಲಿ ಫ್ರಾನ್ಸ್ನಿಂದ ಆಮದು ಮಾಡಿಕೊಳ್ಳಲಾದ ಐದು ರಫೇಲ್ ಫೈಟರ್ ಜೆಟ್ಗಳ ಮೊದಲ ಬ್ಯಾಚ್ ಅನ್ನು ಭಾರತೀಯ ವಾಯುಸೇನೆಯು ಸೇರ್ಪಡೆಗೊಳಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅಂತಿಮ ಸೇರ್ಪಡೆ ಸಮಾರಂಭವು ಆಗಸ್ಟ್ ದ್ವಿತೀಯಾರ್ಧದಲ್ಲಿ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.
ಹರಿಯಾಣ ರಾಜ್ಯದ ಅಂಬಾಲದಲ್ಲಿ ಮಿಲಿಟರಿ ವಾಯುನೆಲೆ ಇದ್ದು, ಇಲ್ಲಿ ರಫೇಲ್ ನಿಯೋಜನೆಯಾಗಲಿದೆ .
“ಭಾರತೀಯ ವಾಯುಪಡೆಯ ಐದು ರಫೇಲ್ನ ಮೊದಲ ಬ್ಯಾಚ್ ಜುಲೈ 2020 ರ ಅಂತ್ಯದ ವೇಳೆಗೆ ಭಾರತಕ್ಕೆ ಬರುವ ಸಾಧ್ಯತೆಯಿದೆ. ಜುಲೈ 29ರಂದು ವಿಮಾನವನ್ನು ಅಂಬಾಲಾದಲ್ಲಿ ವಾಯುಪಡೆಯ ನೆಲೆಗೆ ಸೇರಿಸಲಾಗುತ್ತದೆ. ಆಗಮನದ ಸಂದರ್ಭದಲ್ಲಿ ಯಾವುದೇ ಮೀಡಿಯಾ ಕವರೇಜ್ ಅನ್ನು ಯೋಜಿಸಲಾಗಿಲ್ಲ. ಅಂತಿಮ ಪ್ರವೇಶ ಸಮಾರಂಭವು ಆಗಸ್ಟ್ 20 ರ ದ್ವಿತೀಯಾರ್ಧದಲ್ಲಿ ನಡೆಯಲಿದ್ದು, ಆ ವೇಳೆ ಪೂರ್ಣ ಮೀಡಿಯಾ ಕವರೇಜ್ ಅನ್ನು ಯೋಜಿಸಲಾಗುವುದು ”ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಐಎಎಫ್ನ ಏರ್ ಕ್ರ್ಯೂ ಮತ್ತು ಗ್ರೌಂಡ್ ಕ್ರ್ಯೂ ವಿಮಾನದ ಬಗ್ಗೆ ಅದರ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳು ಸೇರಿದಂತೆ ಸಮಗ್ರ ತರಬೇತಿಯನ್ನು ಪಡೆದಿದ್ದಾರೆ ಮತ್ತು ಈಗ ಅದರಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಆಗಮನದ ನಂತರ, ವಿಮಾನದ ಕಾರ್ಯಾಚರಣೆಯನ್ನು ಅತೀ ಶೀಘ್ರದಲ್ಲಿ ಆರಂಭಿಸಲು ಪ್ರಯತ್ನವನ್ನು ಕೇಂದ್ರೀಕರಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಜುಲೈ 22-24ರವರೆಗೆ ನವದೆಹಲಿಯ ಏರ್ ಹೆಡ್ಕ್ವಾರ್ಟರ್ಸ್ (ವಾಯು ಭವನ)ನಲ್ಲಿ ನಡೆಯಲಿರುವ ವಾಯುಪಡೆಯ ಕಮಾಂಡರ್ಗಳ ಸಮಾವೇಶದಲ್ಲಿ (ಎಎಫ್ಸಿಸಿ) ಹಲವಾರು ಚರ್ಚೆಗಳು ನಡೆಯಲಿದ್ದು, ಈ ವೇಳೆ ರಫೇಲ್ ನಿಯೋಜನೆ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.