ಚಂಡೀಗಢ: ಕರೋನವೈರಸ್ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನವಾಗಿ, ಚಂಡೀಗಢ ರೈಲ್ವೆ ನಿಲ್ದಾಣವು ‘ಮೆಡಿಕಲ್ ಪ್ರೊಟೆಕ್ಷನ್ ಕಿಟ್’ ಒದಗಿಸಲು ವೆಂಡಿಂಗ್ ಮೆಶಿನ್ ಅನ್ನು ಸ್ಥಾಪಿಸಿದೆ. ವರದಿಗಳ ಪ್ರಕಾರ, ಹೊಸದಾಗಿ ಸ್ಥಾಪಿಸಲಾದ ಯಂತ್ರವು ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಫೇಸ್ ಮಾಸ್ಕ್, ಸ್ಯಾನಿಟೈಸರ್ ಮತ್ತು ಕೈಗವಸುಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತದೆ ಎಂದು ವರದಿಗಳು ತಿಳಿಸಿವೆ.
ಸ್ಟೇಷನ್ ಮ್ಯಾನೇಜರ್ ಆಗಿರುವ ದೀಪಕ್ ಕುಮಾರ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ನಾವು ಈ ಯಂತ್ರವನ್ನು ಐದು ದಿನಗಳ ಹಿಂದೆ ಸ್ಥಾಪಿಸಿದ್ದೇವೆ. ಈ ಯಂತ್ರವು ಕಡಿಮೆ ದರದಲ್ಲಿ ಮುಖಗವಸುಗಳು, ಗ್ಲೌಸ್ ಮತ್ತು ಹ್ಯಾಂಡ್ ಸ್ಯಾನಿಟೈಝರ್ಗಳನ್ನು ಒದಗಿಸುತ್ತಿದೆ” ಎಂದಿದ್ದಾರೆ.
ವೆಂಡಿಂಗ್ ಮೆಶಿನ್ ಎರಡು ರೀತಿಯ ಎನ್ -95 ಮುಖಗವಸುಗಳನ್ನು ಒದಗಿಸುತ್ತದೆ ಮತ್ತು ಕೈಗವಸುಗಳನ್ನು ಸಹ ನೀಡುತ್ತದೆ ಎಂದು ಕುಮಾರ್ ಮಾಹಿತಿ ನೀಡಿದರು. ಹ್ಯಾಂಡ್ ಸ್ಯಾನಿಟೈಜರ್ ಎರಡು ಪ್ರಮಾಣದಲ್ಲಿ ಲಭ್ಯವಿದ್ದು, 250 ಎಂಎಲ್ ಬಾಟಲಿಗೆ 100 ರೂ. ಆಗಿದೆ.
ಚಂಡೀಗಢದಲ್ಲಿ ಕರೋನವೈರಸ್ ಸಂಖ್ಯೆ 737 ಕ್ಕೆ ಏರಿದ ನಂತರ ವೆಂಡಿಂಗ್ ಯಂತ್ರವನ್ನು ಸ್ಥಾಪನೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿ 20 ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲಾಗುತ್ತಿವೆ. ವೈರಸ್ ಈ ಪ್ರದೇಶದಾದ್ಯಂತ ವೇಗವಾಗಿ ಹರಡುತ್ತಿರುವುದರಿಂದ, ರಾಜ್ಯ ಸರ್ಕಾರವು ಒಟ್ಟು 11,075 ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಂಡಿದೆ. ಒಟ್ಟು ಮಾದರಿಗಳಲ್ಲಿ 10,277 ಋಣಾತ್ಮಕ ಪರೀಕ್ಷೆ ಆಗಿದ್ದು, 59 ಪ್ರಕರಣಗಳ ಫಲಿತಾಂಶಗಳಿಗೆ ಇನ್ನೂ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂತಹ ವಿಶೇಷ ವೆಂಡಿಂಗ್ ಮೆಶಿನ್ ಅಳವಡಿಸಿದ್ದು ಚಂಡೀಗಢದಲ್ಲಿ ಮಾತ್ರವಲ್ಲ, ಕಳೆದ ತಿಂಗಳು ಪಾಟ್ನಾ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲೂ ಇದನ್ನು ಅಳವಡಿಸಲಾಗಿದೆ. ಪ್ರಯಾಣಿಕರಿಗೆ ಅಗ್ಗದ ಬೆಲೆಯಲ್ಲಿ ಮಾಸ್ಕ್, ಸ್ಯಾನಿಟೈರ್ಗಳನ್ನು ಒದಗಿಸುವುದು ಈ ವೆಂಡಿಂಗ್ ಮೆಶಿನ್ನ ಉದ್ದೇಶವಾಗಿದೆ. ರೈಲ್ವೆಯ ಹಲವು ಒಳ್ಳೆಯ ಕಾರ್ಯಗಳಲ್ಲಿ ಇದೂ ಒಂದು ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.