ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಘಟಕವು ಭಾಷಾ ಕೌಶಲ್ಯವನ್ನು ಹೆಚ್ಚಿಸಲು ಇಂದಿನಿಂದ ಆನ್ಲೈನ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ.
ಎರಡು ತಿಂಗಳ ಕಾರ್ಯಕ್ರಮ ‘ಭಾಷಾ ಸಂಗಮ್’ ಎಲ್ಲರಿಗೂ ಉಚಿತವಾಗಿ ಲಭ್ಯವಾಗಲಿದೆ ಎಂದು ಎಬಿವಿಪಿಯ ಉಸ್ತುವಾರಿ ಅಶುತೋಷ್ ಸಿಂಗ್ ತಿಳಿಸಿದ್ದಾರೆ.
ಕಾರ್ಯಕ್ರಮವು ಹದಿನೈದಕ್ಕೂ ಹೆಚ್ಚು ವಿದೇಶಿ ಮತ್ತು ಭಾರತೀಯ ಭಾಷೆಗಳ ಮೂಲಭೂತ ಅಂಶಗಳನ್ನು ಕಲಿಸಲಿದೆ. ಭಾಗವಹಿಸುವವರಿಗೆ ಜರ್ಮನ್, ಪರ್ಷಿಯನ್, ಕೊರಿಯನ್, ಸ್ಪ್ಯಾನಿಷ್, ತೆಲುಗು, ಮಲಯಾಳಂ, ಮಣಿಪುರಿ, ಇತರ ಭಾಷೆಗಳ ಮೂಲಗಳನ್ನು ಕಲಿಸಲಾಗುತ್ತದೆ.
ಕೋರ್ಸ್ ಅವಧಿಯಲ್ಲಿ ಪ್ರತಿ ವಾರ ಶುಕ್ರವಾರದಿಂದ ಶನಿವಾರದವರೆಗೆ ಗೂಗಲ್ನ ಅಪ್ಲಿಕೇಶನ್ ಆದ ಗೂಗಲ್ ಕ್ಲಾಸ್ರೂಮ್ ಮೂಲಕ ತರಗತಿಗಳನ್ನು ನಡೆಸಲಾಗುತ್ತದೆ.
ಜೆಎನ್ಯು ಮತ್ತು ಇತರ ವಿಶ್ವವಿದ್ಯಾಲಯಗಳ ಸುಮಾರು ಐವತ್ತು ಮಾರ್ಗದರ್ಶಕರು ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಭಾಷೆಗಳನ್ನು ಕಲಿಸಲಿದ್ದಾರೆ ಎಂದು ಜೆಎನ್ಯುನ ಎಬಿವಿಪಿ ಘಟಕದ ಅಧ್ಯಕ್ಷ ಶಿವಂ ಚೌರಾಸಿಯಾ ಮಾಹಿತಿ ನೀಡಿದ್ದಾರೆ.
“ನಮ್ಮ ಜೆಎನ್ಯು ಭಾಷಾ ಕೋರ್ಸ್ಗಳಿಗೆ ಹೆಸರುವಾಸಿಯಾಗಿದೆ. ಜೆಎನ್ಯು ಸಂಶೋಧನಾ ವಿದ್ವಾಂಸರು ಮತ್ತು ಶಿಲ್ಲಾಂಗ್ನ ನಾರ್ತ್ ಈಸ್ಟ್ ಹಿಲ್ ಯೂನಿವರ್ಸಿಟಿ , ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ ಮತ್ತು ವಿವಿಧ ಕಾಲೇಜುಗಳ ಶಿಕ್ಷಕರು ಭಾಗವಹಿಸುವವರಿಗೆ ಮಾರ್ಗದರ್ಶನ ನೀಡುತ್ತಾರೆ” ಎಂದು ಅವರು ಹೇಳಿದ್ದಾರೆ.
ಈವರೆಗೆ ಕಾರ್ಯಕ್ರಮಕ್ಕಾಗಿ ಸಾವಿರಕ್ಕೂ ಹೆಚ್ಚು ನೋಂದಣಿಗಳನ್ನು ಸ್ವೀಕರಿಸಲಾಗಿದೆ. ಭಾಗವಹಿಸುವವರ ಸಂಖ್ಯೆಗೆ ಯಾವುದೇ ಮಿತಿ ಹಾಕಿಲ್ಲ. ಗರಿಷ್ಠ ಜನರು ಕಾರ್ಯಕ್ರಮದ ಲಾಭ ಪಡೆಯಬೇಕೆಂದು ನಾವು ಬಯಸುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.
ಕಾರ್ಯಕ್ರಮವು ಎಲ್ಲರಿಗೂ ಸೇರಿದೆ, ವಿದ್ಯಾರ್ಥಿಯಿಂದ ಗೃಹಿಣಿಯವರೆಗೆ ಯಾರಾದರೂ ಇದರಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಚೌರಾಸಿಯಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.