ನವದೆಹಲಿ: ಅಮೆರಿಕದ ಬಳಿಕ ಅತಿ ಹೆಚ್ಚು ಕೊರೋನವೈರಸ್ ಮಾದರಿ ಪರೀಕ್ಷೆಗಳನ್ನು ನಡೆಸಿದ ರಾಷ್ಟ್ರ ಭಾರತ. ಅಮೆರಿಕ ಇದುವರೆಗೆ 42 ಮಿಲಿಯನ್ ಕೋವಿಡ್-19 ಪರೀಕ್ಷೆಗಳನ್ನು ನಡೆಸಿದೆ, ಭಾರತ 12 ಮಿಲಿಯನ್ ಪರೀಕ್ಷೆಗಳನ್ನು ನಡೆಸಿದೆ.
ಈ ಬಗ್ಗೆ ಅಮೆರಿಕದ ಶ್ವೇತಭವನವೇ ಹೇಳಿಕೊಂಡಿದೆ. ಅಮೆರಿಕದಲ್ಲಿ 42 ಮಿಲಿಯನ್ ಕೊರೋನವೈರಸ್ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ. ಅದರಲ್ಲಿ 3.5 ಮಿಲಿಯನ್ ಮಾದರಿಗಳು ಪಾಸಿಟಿವ್ ಬಂದಿದೆ. ಇದರಲ್ಲಿ 138,000 ಜನರು ಮೃತಪಟ್ಟಿದ್ದಾರೆ.
ಜಾಗತಿಕವಾಗಿ 13.6 ಮಿಲಿಯನ್ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 586,000 ಜನರು ಮೃತಪಟ್ಟಿದ್ದಾರೆ.
“ಕೊರೋನವೈರಸ್ಗೆ ಸಂಬಂಧಿಸಿದಂತೆ ನಾವು 42 ಮಿಲಿಯನ್ ಪರೀಕ್ಷೆಗಳನ್ನು ನಡೆಸಿದ್ದೇವೆ. ಭಾರತ ಎರಡನೇ ಅತಿಹೆಚ್ಚು 12 ಮಿಲಿಯನ್ ಪರೀಕ್ಷೆಗಳನ್ನು ನಡೆಸಿದೆ. ಪರೀಕ್ಷೆಯ ವಿಷಯದಲ್ಲಿ ನಾವು ವಿಶ್ವದಲ್ಲೇ ಮುಂಚೂಣಿಯಲ್ಲಿ ಇದ್ದೇವೆ” ಎಂದು ಶ್ವೇತಭವನದ ಕಾರ್ಯದರ್ಶಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಭಾರತದಲ್ಲಿ ಒಂದು ಕೋಟಿಗೂ ಅಧಿಕ ಕೊರೋನವೈರಸ್ ಪರೀಕ್ಷೆಗಳನ್ನು ನಡೆಸಲಾಗಿದೆ. ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಳಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಪ್ರಯೋಗಗಳಿಗೂ ಅನುಮೋದನೆಯನ್ನು ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.