ನವದೆಹಲಿ: ಜುಲೈ 17 ರಂದು ವಿಶ್ವಸಂಸ್ಥೆಯ 75 ನೇ ವಾರ್ಷಿಕೋತ್ಸವದ ಮುನ್ನಾದಿನದಂದು ನ್ಯೂಯಾರ್ಕ್ನ ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (UN ECOSOC) ಉನ್ನತ ಮಟ್ಟದ ವಿಭಾಗದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಮುಖ್ಯ ಭಾಷಣ ಮಾಡಲಿದ್ದಾರೆ.
ಪ್ರಧಾನ ಮಂತ್ರಿಯವರನ್ನು ನಾರ್ವೇ ಪ್ರಧಾನಿ ಎರ್ನಾ ಸೋಲ್ಬರ್ಗ್ ಮತ್ತು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಸೇರಿಕೊಳ್ಳಲಿದ್ದಾರೆ.
ಉನ್ನತ ಮಟ್ಟದ ವಿಭಾಗದ ಕಾರ್ಯಕ್ರಮವನ್ನು ವಾರ್ಷಿಕವಾಗಿ ECOSOC ನಡೆಸುತ್ತದೆ ಮತ್ತು ಸರ್ಕಾರ, ಖಾಸಗಿ ವಲಯ, ನಾಗರಿಕ ಸಮಾಜ ಮತ್ತು ಅಕಾಡೆಮಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ವೈವಿಧ್ಯಮಯ ಗುಂಪು ಇದರಲ್ಲಿ ಭಾಗಿಯಾಗುತ್ತದೆ. ಈ ಬಾರಿ ಉನ್ನತ ಮಟ್ಟದ ವಿಭಾಗದ ವಿಷಯವೆಂದರೆ “ಕೋವಿಡ್-19ರ ನಂತರದಲ್ಲಿ ಬಹುಪಕ್ಷೀಯತೆ: 75 ನೇ ವಾರ್ಷಿಕೋತ್ಸವದಲ್ಲಿ ನಮಗೆ ಯಾವ ರೀತಿಯ ಯುಎನ್ ಬೇಕು”ಎಂಬುದಾಗಿದೆ.
ಭದ್ರತಾ ಮಂಡಳಿಗೆ ಭಾರತ ಆಯ್ಕೆಯಾದ ನಂತರ ಯುಎನ್ನಲ್ಲಿ ಪ್ರಧಾನಮಂತ್ರಿಯವರ ಮೊದಲ ಭಾಷಣವಾಗಲಿರುವುದರಿಂದ ಇದು ಮಹತ್ವದ ಬೆಳವಣಿಗೆಯಾಗಿದೆ. 2020 ರ ಜೂನ್ 17 ರಂದು (2021-22ರ ಅವಧಿಗೆ) ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಿ ಭಾರತ ಆಯ್ಕೆಯಾಗಿದೆ. ಇದರ ಬಳಿಕ ಮೋದಿ ವಿಶಾಲ ಯುಎನ್ ಸದಸ್ಯರನ್ನು ಉದ್ದೇಶಿಸಿ ಮಾತನಾಡುವ ಮೊದಲ ಅವಕಾಶ ಇದಾಗಿದೆ ಎಂಬ ಕಾರಣಕ್ಕೆ ಈವೆಂಟ್ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.
ಪ್ರಧಾನಿ ಮೋದಿ ಅವರು ಈ ಹಿಂದೆ 22 ಜನವರಿ 2016 ರಂದು ECOSOCನ 70 ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದ್ದರು.
ಬದಲಾಗುತ್ತಿರುವ ಅಂತರರಾಷ್ಟ್ರೀಯ ವಾತಾವರಣ ಮತ್ತು ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಅಧಿವೇಶನವು ಬಹುಪಕ್ಷೀಯತೆಯ ಹಾದಿಯನ್ನು ರೂಪಿಸುವ ನಿರ್ಣಾಯಕ ಶಕ್ತಿಗಳ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ ಮತ್ತು ಬಲವಾದ ಬಹುಪಕ್ಷೀಯ ನಾಯಕತ್ವ, ಪರಿಣಾಮಕಾರಿ ಅಂತರರಾಷ್ಟ್ರೀಯ ಸಂಸ್ಥೆಗಳು, ವಿಸ್ತಾರಗೊಳಿಸುವ ಮೂಲಕ ಬಹುಪಕ್ಷೀಯ ಕಾರ್ಯಸೂಚಿಯನ್ನು ಹೆಚ್ಚಿಸುವ ಮಾರ್ಗಗಳನ್ನು ಅನ್ವೇಷಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.