ನವದೆಹಲಿ: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯು ನರೇಂದ್ರ ಮೋದಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸೈಬರ್ ಅಪರಾಧ ದೂರುಗಳನ್ನು ಆನ್ಲೈನ್ನಲ್ಲಿ ನೋಂದಾಯಿಸುವುದಕ್ಕಾಗಿ ಕೆಲವು ತಿಂಗಳ ಹಿಂದೆ ಸರ್ಕಾರ www.cybercrime.gov.in ಎಂಬ ಪೋರ್ಟಲ್ ಅನ್ನು ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧಗಳನ್ನು ವರದಿ ಮಾಡಲು ಪೋರ್ಟಲ್ನಲ್ಲಿ ವಿಶೇಷ ಅವಕಾಶವಿದೆ ಎಂದು ಟ್ವೀಟ್ನಲ್ಲಿ ಶಾ ಹೇಳಿದ್ದಾರೆ. ಅಂತಹ ಯಾವುದೇ ಘಟನೆಯನ್ನು ವರದಿ ಮಾಡಲು ಒಬ್ಬರು ಪೋರ್ಟಲ್ಗೆ ಭೇಟಿ ನೀಡಬಹುದು ಎಂದು ಅವರು ಹೇಳಿದರು.
ಸೈಬರ್ ಅಪರಾಧ ದೂರುಗಳನ್ನು ಆನ್ಲೈನ್ನಲ್ಲಿ ವರದಿ ಮಾಡಲು ಸಂತ್ರಸ್ತರಿಗೆ ಮತ್ತು ದೂರುದಾರರಿಗೆ ಅನುಕೂಲವಾಗುವಂತೆ ವಿನ್ಯಾಸಪಡಿಸಲಾದ ಈ ಪೋರ್ಟಲ್ ಕೇಂದ್ರ ಸರ್ಕಾರದ ಉಪಕ್ರಮವಾಗಿದೆ.
The safety and security of women & children is the top most priority of Modi government.
There is also a special provision on https://t.co/hfOVHOFcCy to report cyber crimes against women & children.
You can visit the portal to report any such incident. pic.twitter.com/HvAsnCzJRD
— Amit Shah (@AmitShah) July 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.