ನವದೆಹಲಿ: 10 ಮತ್ತು 12 ನೇ ತರಗತಿ ಸಿಬಿಎಸ್ಇ ಮಂಡಳಿಯ ಪರೀಕ್ಷೆಗಳನ್ನು ತೇರ್ಗಡೆಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ “ಯುವ ಸ್ನೇಹಿತರನ್ನು” ಅಭಿನಂದಿಸಿದ್ದಾರೆ ಮತ್ತು ಫಲಿತಾಂಶದ ಬಗ್ಗೆ ಸಂತುಷ್ಟವಿಲ್ಲದವರು ಒಂದು ಪರೀಕ್ಷೆಯು ತಾವು ಯಾರೆಂಬುದನ್ನು ವ್ಯಾಖ್ಯಾನಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಕಿವಿಮಾತು ಹೇಳಿದ್ದಾರೆ.
“ತಮ್ಮ ಹತ್ತನೇ ತರಗತಿ ಮತ್ತು ಹನ್ನೆರಡನೇ ಸಿಬಿಎಸ್ಇ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ನನ್ನ ಎಲ್ಲ ಯುವ ಗೆಳೆಯರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
“ಯಾರು ಫಲಿತಾಂಶದ ಬಗ್ಗೆ ಸಂತೋಷಗೊಂಡಿಲ್ಲವೋ ಅವರಿಗೆ ನಾನು ಹೇಳಲು ಬಯಸವುದೇನೆಂದರೆ ಒಂದು ಪರೀಕ್ಷೆ ನೀವು ಯಾರೆಂಬುದನ್ನು ವ್ಯಾಖ್ಯಾನಿಸುವುದಿಲ್ಲ. ಪ್ರತಿಯೊಬ್ಬರು ಅದ್ಭುತವಾದ ಪ್ರತಿಭೆಯನ್ನು ಹೊಂದಿರುತ್ತಾರೆ. ಸಂತೃಪ್ತಿಯೊಂದಿಗೆ ಜೀವನ ನಡೆಸಿ. ಭರವಸೆಯನ್ನು ಕಳೆದುಕೊಳ್ಳಬೇಡಿ. ನೀವು ಅದ್ಭುತವನ್ನೇ ಸೃಷ್ಟಿಸಬಲ್ಲಿರಿ” ಎಂದಿದ್ದಾರೆ.
ಈ ವರ್ಷ 12ನೇ ತರಗತಿ ಉತ್ತೀರ್ಣ ಪ್ರಮಾಣ ಕಳೆದ ವರ್ಷದ 83.40%ರಿಂದ ಈ ವರ್ಷ 88.78%ಕ್ಕೆ ಏರಿಕೆಯಾಗಿದೆ. 10ನೇ ತರಗತಿ ಫಲಿತಾಂಶ 0.36%ದಷ್ಟು ಈ ಬಾರಿ ಹೆಚ್ಚಳವಾಗಿದೆ.
Congratulations to all my young friends who have successfully passed their Class X and XII CBSE examinations. Wishing them the very best for their future endeavours.
— Narendra Modi (@narendramodi) July 15, 2020
For those who aren’t happy with their CBSE Class X and XII results, I want to tell them- one exam doesn’t define who you are. Each of you is blessed with numerous talents. Live life to the fullest. Never lose hope, always look ahead. You will do wonders!
— Narendra Modi (@narendramodi) July 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.