ಬೆಳ್ತಂಗಡಿ : ಕಂದಾಯ ಇಲಾಖೆಗೆ ಸಂಬಂಧಪಟ್ಟ ಯಾವುದೇ ಅರ್ಜಿಗಳನ್ನು ಹೋಬಳಿ ಮಟ್ಟದಲ್ಲಿ ನೀಡಬೇಕಾಗಿದ್ದು ಕಿ.ಮೀ. ಗಟ್ಟಲೆ ದೂರದ ಹೋಬಳಿಗೆ ಅಲೆದಾಟ. ಆಧಾರ್ ಕೇಂದ್ರಗಳಲ್ಲಿ ಟೋಕನ್ ಸಿಸ್ಟಮ್ನಿಂದ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ. ವಿದ್ಯಾರ್ಥಿಗಳ ಸ್ಕಾಲರ್ಶಿಪ್ನಿಂದ ಹಿಡಿದು ಎಲ್ಲದಕ್ಕೂಆಧಾರ್-ಜಾತಿ-ಆದಾಯ. ದಿನನಿತ್ಯ ತಾಲೂಕಿನ ಮೂರು ಹೋಬಳಿಗಳ ಅಟಲ್ಜೀ ಜನಸ್ನೇಹಿ ಕೇಂದ್ರಗಳು ಜನರಿಂದತುಂಬಿದೆ.
ಬೆಳ್ತಂಗಡಿ, ಕೊಕ್ಕಡ ಹಾಗೂ ವೇಣೂರು ಮೂರು ಹೋಬಳಿಗಳನ್ನು ಒಳಗೊಂಡಿದ್ದು ಜನ ಸಾಮಾನ್ಯಯ ಗೋಳು ಮಾತ್ರಇನ್ನು ನಿಂತಿಲ್ಲ. ಜಾತಿ-ಆದಾಯ, ಸಂಧ್ಯಾ ಸುರಕ್ಷಾ, ವಾಸ್ತವ್ಯ, ವಿಧವಾ ವೇತನ, ಅಂಗವಿಕಲ ವೇತನ, ಗಡಿಗುರುತು, 11ಬಿ ಅರ್ಜಿಗಳನ್ನು ಆಯಾಯ ಹೋಬಳಿ ಕೇಂದ್ರದಲ್ಲಿ ನೀಡಬೇಕು. ಮಡಂತ್ಯಾರು ಸಮೀಪದ ಕುಕ್ಕಳ, ಪಾರೆಂಕಿ, ತಣ್ಣೀರುಪಂತ, ಮಚ್ಚಿನ, ಕಳಿಯ, ನ್ಯಾಯತರ್ಪು ಗ್ರಾಮಗಳ ಜನರುಸುಮಾರು 40 ಕಿಮೀ ದೂರಕೊಕ್ಕಡಕ್ಕೆ ಹೋಗಬೇಕು. ಬೆಳ್ತಂಗಡಿ ಹೋಬಳಿ ಹತ್ತಿರವಿದ್ದರೂಜನರ ಸಮಸ್ಯೆ ಕೇಳುವವರಾರು. ಶಿರ್ಲಾಲು, ಕರಂಬಾರುಗ್ರಾಮದವರು ವೇಣೂರು ಹೋಬಳಿಗೆ, ನೆರಿಯಾ, ಮಲವಂತಿಗೆಗ್ರಾಮದ ಎಳನೀರು ಜನರು ಬೆಳ್ತಂಗಡಿ ಹೋಬಳಿಗೆ ಬರಬೇಕು. ಎಳನೀರಿನಿಂದ 120 ಕಿಮೀ ಸುತ್ತುಬಳಸಿ ಬೆಳ್ತಂಗಡಿ ಹೋಬಳಿಗೆ ಬರಬೇಕು.
ಪ್ರಸ್ತಾವನೆ ಸಲ್ಲಿಕೆ : ಈಗಿರುವ ಹೋಬಳಿಯಲ್ಲದೆ ಇನ್ನು ಮೂರು ಹೋಬಳಿಯನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಉಜಿರೆ, ಅಳದಂಗಡಿ ಹಾಗೂ ಕಲ್ಲೇರಿಯಲ್ಲಿ ಹೋಬಳಿಯನ್ನು ಸ್ಥಾಪಿಸಲು ಶಾಸಕ ಕೆ. ವಸಂತ ಬಂಗೇರಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಹೋಬಳಿ ವಿಂಗಡಿಸುವಕಾರ್ಯ ಪ್ರಗತಿಯಲ್ಲಿದೆ ಎಂಬ ಮಾಹಿತಿಕಂದಾಯಇಲಾಖೆಯಿಂದ ಲಭ್ಯವಾದ ಮಾಹಿತಿ.
ಆಧಾರವಿಲ್ಲದ ಆಧಾರ್: ತಾಲೂಕಿನ ಮೂರು ಹೋಬಳಿಗಳಲ್ಲಿ ಆಧಾರ್ ಕೇಂದ್ರಗಳನ್ನು ತೆರೆಯಲಾಗಿದೆ. ನೆಮ್ಮದಿ ಕೇಂದ್ರದಲ್ಲೇಆಧಾರ್ಕೇಂದ್ರವಿದ್ದು ಜನಜಂಗುಳಿಯಿಂದ ಕೂಡಿರುತ್ತದೆ. ಆಧಾರ್ ನೋಂದಾವಣೆ ಮಾಡಲುಯಾವ ದಿನದಂದು ಬರಬೇಕೆಂದುಟೋಕನ್ ನೀಡಲಾಗುತ್ತಿದೆ. ಕಂಪ್ಯೂಟರ್ಆಪರೇಟರ್ ಹೇಳುವ ಪ್ರಕಾರ ದಿನದಲ್ಲಿಗರಿಷ್ಟ ೩೦ ಮಂದಿಯ ಹೆಸರನ್ನುಅಪ್ಲೋಡ್ ಮಾಡಲು ಸಾಧ್ಯ. ಸರ್ವರ್ ಸ್ಲೋಇದ್ದರೆ 10-15 ಮಂದಿಯದ್ದು ಮಾತ್ರಅಪ್ಲೋಡ್ ಮಾಡಬಹುದು.
ರಿಜಿಸ್ಟಾರ್ ನಿರ್ವಹಣೆಇಲ್ಲ: ಆಧಾರ್ ನೋಂದಾವಣೆ ಮಾಡಲುಗುತ್ತಿಗೆ ನೀಡಲಾಗಿದೆ. ಆಧಾರ್ ಮಾಡಿಸಲು ಬರುವವರಿಗೆ ಟೋಕನ್ ಸಿಸ್ಟಮ್ ಮಾಡಲಾಗುತ್ತಿದ್ದರೂದಾಖಲಾತಿ ಪುಸ್ತಕ ನಿರ್ವಹಣೆ ಮಾಡುತ್ತಿಲ್ಲ. ಅರ್ಜಿಗಳನ್ನು ತೆಗೆದುಕೊಳ್ಳದೆ ಬಿಳಿ ಹಾಳೆಯ ಚೀಟಿಯಲ್ಲಿ ದಿನಾಂಕ ನಮೂದಿಸಿ ಬರೆದುಕೊಡಲಾಗುತ್ತಿದೆ. ಚೀಟಿ ಪಡೆದುಕೊಂಡವರುನಮೂದಿಸಿದ ದಿನದಂದು ಬಂದಾಗಆಧಾರ್ಕೇಂದ್ರದಲ್ಲಿಅದಕ್ಕೆಯಾವುದೇ ಬೆಲೆ ಇಲ್ಲ. ಚೀಟಿ ಇದ್ದವರೂ ಸರತಿ ಸಾಲಿನಲ್ಲಿ ನಿಂತು ಕೈಬಿಸಿ ಮಾಡಿಯೇಆಧಾರ್ ನೋಂದಾವಣೆಯನ್ನು ಮಾಡಲಾಗುತ್ತಿದೆಎಂದುಅರ್ಜಿದಾರರಆರೋಪ. ತಾಪಂ ಸಭೆಯಲ್ಲೂಇದರ ಬಗ್ಗೆ ಪ್ರಸ್ತಾಪವಾಗಿತ್ತು.
ಆಧಾರ್ ಮಾಡಿಸಲು 8 ತಿಂಗಳು: ಆಧಾರ್ ನೋಂದಾವಣೆಎಲ್ಲಾ ದಾಖಲೆಗಳಿಗೂ ಕಡ್ಡಾಯವೆಂದುಕೇಂದ್ರ ಸರಕಾರ ಹೇಳುತ್ತಿದೆ. ಇದರಿಂದಎಲ್ಲದಕ್ಕೂಆಧಾರ್ ಕೇಳುತ್ತಿದ್ದಾರೆ. ಆಧಾರ್ ಆಗದವರು ಅರ್ಜಿ ಹಿಡಿದುಕೊಂಡು ಆಧಾರ್ಕೇಂದ್ರ ದತ್ತ ಹೋದರೆ ಟೋಕನ್ ನೀಡಲಾಗುತ್ತಿದೆ. ಯಾವುದೇ ಆಧಾರವಿಲ್ಲದ ಬಿಳಿ ಚೀಟಿಯಲ್ಲಿ 8-10 ತಿಂಗಳು ಬಿಟ್ಟು ನೋಂದಾವಣೆಗೆ ಬರುವಂತೆ ದಿನಾಂಕವನ್ನು ನಮೂದಿಸಿ ಬರೆದುಕೊಡಲಾಗುತ್ತಿದೆ. ದಲ್ಲಾಳಿಗಳ ಮೂಲಕ ಹೋದರೆ ಹೋದ ಕೆಲಸ ಸಕ್ಸಸ್. ಸುಲ್ಕೇರಿಗ್ರಾಮದ ನಾಯಿದಗುರಿ ನಿವಾಸಿಯೊಬ್ಬರಿಗೆ 2016 ಮಾರ್ಚ್ ೮ ರಂದುಆಧಾರ್ ನೋಂದಾವಣೆ ಮಾಡಿಸಲು ಸೋಡಾಚೀಟಿ ನೀಡಿದ್ದಾರೆ.
ಆದಾಯ ಹಾಗೂ ಜಾತಿ ಸರ್ಟಿಫಿಕೇಟ್ಅರ್ಜಿಕೊಡಲುಕೊಕ್ಕಡಕ್ಕೆ ಹೋಗಬೇಕಾಗಿದೆ. ನಮ್ಮಲಿಂದ ಮೂರು ವಾಹನಗಳನ್ನು ಬದಲಾಯಿಸಿ ಸುಮಾರು 40 ಕಿಮೀ ಹೋಗಬೇಕಾಗಿದೆ. ನಮ್ಮಂತಹ ವಿದ್ಯಾರ್ಥಿಗಳಿಗೆ, ಬಡವರಿಗೆತುಂಬಾ ಕಷ್ಟ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಮಗೆ ದೂರದ ಹೋಬಳಿಗೆ ಕೇಂದ್ರಕ್ಕೆ ಹೋದರೆಒಂದೇ ದಿನದಲ್ಲಿ ಕೆಲಸ ಆಗುವುದಿಲ್ಲ. ಮೂರ್ನಾಲ್ಕು ಬಾರಿ ಹೋಗಬೇಕು. ಇದಕ್ಕೆ ಪರ್ಯಾಯ ವ್ಯವಸ್ಥೆ ಆಗಬೇಕು.-ಸವಿತಾ, ಕುಕ್ಕಳ (ಸ್ನಾತಕೋತ್ತರ ಪದವಿ ಮಾಡಲುಜಾತಿ/ಆದಾಯಕ್ಕೆಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿ)
ಈಗ ಆಧಾರ್ಕಾರ್ಡಿಗೆಅರ್ಜಿ ನೀಡಿದರೆ 7-8 ತಿಂಗಳ ನಂತರ ನೋಂದಾವಣೆ ಮಾಡಲುಚೀಟಿ ನೀಡುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿ ವೇತನ, ಇನ್ನಿತರ ಕೆಲಸಗಳಿಗಾಗಿ ಆನ್ಲೈನ್ನಲ್ಲಿಅರ್ಜಿ ಸಲ್ಲಿಸುವವರಿಗೆಕಷ್ಟವಾಗುತ್ತಿದೆ. ಪ್ರತಿ ಹೋಬಳಿಯಲ್ಲಿ ತಲಾ೩ರಂತೆಆಧಾರ್ ಕೇಂದ್ರಗಳನ್ನು ತೆರೆಯಬೇಕು. ಹೋಬಳಿಯನ್ನು ವಿಂಗಡಿಸುವ ಕೆಲಸ ತ್ವರಿತವಾಗಿ ಮಾಡಿಅಟಲ್ಜೀಜನಸ್ನೇಹಿ ಕೇಂದ್ರಗಳನ್ನು ಸ್ಥಾಪಿಸಬೇಕು. ಸರಕಾರಿ ಇಲಾಖೆಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕು.- ಶೇಖರಎಲ್., ಸಾಮಾಜಿಕ ಹೋರಾಟಗಾರ, ಬೆಳ್ತಂಗಡಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.