ನವದೆಹಲಿ: ಪ್ರತಿ ದಿನ ಕೋವಿಡ್ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್). ಕಳೆದ 24 ಗಂಟೆಗಳಲ್ಲಿ ಮೊದಲ ಬಾರಿಗೆ ಕೋವಿಡ್-19 ಅನ್ನು ಪತ್ತೆಹಚ್ಚಲು ಮೂರು ಲಕ್ಷ ಪರೀಕ್ಷೆಗಳನ್ನು ಅದು ನಡೆಸಿದೆ.
ಅಧಿಕಾರಿಗಳ ಪ್ರಕಾರ, ಜುಲೈ 14 ರವರೆಗೆ 1,24,12,664 ಮಾದರಿಗಳನ್ನು ಕರೋನವೈರಸ್ಗಾಗಿ ಪರೀಕ್ಷಿಸಲಾಗಿದೆ. ಮಂಗಳವಾರ ಒಂದೇ ದಿನ ಅದು 3,20,161 ಮಾದರಿಗಳನ್ನು ಪರೀಕ್ಷಿಸಿದೆ.
ಪರೀಕ್ಷೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಐಸಿಎಂಆರ್ ದೇಶಾದ್ಯಂತ ಸಾರ್ವಜನಿಕ 865 ಮತ್ತು ಖಾಸಗಿ ವಲಯದ 358 ಸೇರಿದಂತೆ ಒಟ್ಟು 1,223 ಕೋವಿಡ್ -19 ಪರೀಕ್ಷಾ ಪ್ರಯೋಗಾಲಯಗಳಿಗೆ ಅನುಮೋದನೆಯನ್ನು ನೀಡಿದೆ. ಇದು 662 RT-PCR ಲ್ಯಾಬ್ಗಳನ್ನು ಮತ್ತು 491 ಟ್ರೂನಾಟ್ ಲ್ಯಾಬ್ಸ್ ಮತ್ತು 99 ಸಿಬಿಎನ್ಎಟಿ ಲ್ಯಾಬ್ಸ್ ಗಳನ್ನು ಒಳಗೊಂಡಿದೆ.
ಕೋವಿಡ್-19 ಗಾಗಿ ಹೆಚ್ಚಿನ ಸಂಖ್ಯೆಯ ಪರೀಕ್ಷೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ಸಂಬಂಧಿತ ರಾಜ್ಯ ಸರ್ಕಾರಗಳು, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಐಸಿಎಂಆರ್ ಸಲಹೆ ನೀಡಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಮತ್ತು ಜೀವಗಳನ್ನು ಉಳಿಸಲು ಪರೀಕ್ಷೆ, ಟ್ರ್ಯಾಕಿಂಗ್ ಮತ್ತು ಚಿಕಿತ್ಸೆಯು ಏಕೈಕ ಮಾರ್ಗವಾಗಿರುವುದರಿಂದ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದಿದೆ. ಪರೀಕ್ಷೆಯನ್ನು ದೇಶದ ಎಲ್ಲಾ ಭಾಗಗಳಲ್ಲಿರುವ ಎಲ್ಲಾ ರೋಗಲಕ್ಷಣದ ವ್ಯಕ್ತಿಗಳಿಗೆ ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಬೇಕು ಮತ್ತು ಸೋಂಕನ್ನು ತಡೆಗಟ್ಟಲು ಸಂಪರ್ಕವನ್ನು ಪತ್ತೆಹಚ್ಚುವ ಕಾರ್ಯವಿಧಾನಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕೋವಿಡ್-19 ಕಾರ್ಯತಂತ್ರಗಳ ಕುರಿತು ಐಸಿಎಂಆರ್ನ ಇತ್ತೀಚಿನ ಸಲಹೆಗಳಲ್ಲಿ ತಿಳಿಸಲಾಗಿದೆ.
ನಮ್ಮ ಪರೀಕ್ಷಾ ಸಾಮರ್ಥ್ಯವನ್ನು ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳ ಮೂಲಕ ದಿನಕ್ಕೆ ಮೂರು ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಐಸಿಎಂಆರ್ ಅಧಿಕಾರಿ ತಿಳಿಸಿದ್ದಾರೆ.
ಭಾರತದಲ್ಲಿ ಒಟ್ಟು ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ 9,36,181 ಕ್ಕೆ ಏರಿದೆ ಮತ್ತು ಕಳೆದ 24 ಗಂಟೆ ಅಂದರೆ ಬುಧವಾರ ಬೆಳಿಗ್ಗೆ 8 ಗಂಟೆಯವರೆಗೆ 29,429 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.