ನವದೆಹಲಿ: ಕೊರೋನಾ ಸೋಂಕಿನ ಬಿಕ್ಕಟ್ಟಿನ ನಡುವೆಯೂ ಭಾರತದಲ್ಲಿ ಹೆಸರು ಗಳಿಸಿರುವ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ 1.2 ಬಿಲಿಯನ್ ಡಾಲರ್ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.
ಫ್ಲಿಪ್ಕಾರ್ಟ್ ಗ್ರೂಫ್ ನ ಬಹುಪಾಲು ಪಾಲುದಾರನಾಗಿರುವ ವಾಲ್ ಮಾರ್ಟ್ ನೇತೃತ್ವದಲ್ಲಿ ಅನೇಕ ಹೂಡಿಕೆದಾರರು ಈ ಇ- ಕಾಮರ್ಸ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಆ ಮೂಲಕ ಸದ್ಯ ಸಂಸ್ಥೆಯು 24.9 ಬಿಲಿಯನ್ ಡಾಲರ್ ಗಳಷ್ಟು ಮೌಲ್ಯವನ್ನು ಏರಿಸಿಕೊಂಡಿದೆ ಎಂದೂ ಫ್ಲಿಪ್ಕಾರ್ಟ್ ಮಾಹಿತಿ ನೀಡಿದೆ. ಷೇರುದಾರರು ಮಾಡಿರುವ ಹೂಡಿಕೆಯ ಕಾರಣದಿಂದಲೇ ಸಂಸ್ಥೆ ದೇಶದಲ್ಲಿ ಇಂತಹ ಆರೋಗ್ಯ, ಆರ್ಥಿಕ ಬಿಕ್ಕಟ್ಟಿನಲ್ಲಿಯೂ ಸದೃಢವಾಗಿದೆ ಎಂದೂ ಸಂಸ್ಥೆ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಫ್ಲಿಪ್ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ, ಭಾರತಲ್ಲಿ ಕೊರೋನಾ ಕಾರಣದಿಂದಾಗಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಠಿಣ ಸವಾಲಿನ ನಡುವೆಯೂ ಸಂಸ್ಥೆ ಭಾರತೀಯರ ಬೇಡಿಕೆಗಳನ್ನು ಪೂರೈಸುವತ್ತ ಕ್ರಮ ಕೈಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸಂಸ್ಥೆ ಸದೃಢವಾಗಿ ಬೆಳೆದಿದೆ ಎಂದರೆ ಅದಕ್ಕೆ ಕಾರಣ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತಿರುವ ಷೇರುದಾರರಾಗಿದ್ದು, ನಮಗೆ ಪ್ರೋತ್ಸಾಹ ನೀಡಿದ ಅವರಿಗೆ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ವಾಲ್ ಮಾರ್ಟ್ ನಿಂದ ಹೂಡಿಕೆ ಆರಂಭವಾದಂದಿನಿಂದ ಫ್ಲಿಪ್ಕಾರ್ಟ್ ತನ್ನ ಸೇವೆಯನ್ನು ಭಾರತದ ಉದ್ದಗಲದಲ್ಲಿ ಮತ್ತಷ್ಟು ವಿಸ್ತರಿಸಿಕೊಂಡಿದೆ. ಗ್ರಾಹಕರಿಗೆ ಶೀಘ್ರ ಮತ್ತು ತಡೆ ರಹಿತ ಸೇವೆಯನ್ನು ಕೊಡುವ ನಿಟ್ಟಿನಲ್ಲಿಯೂ ಸಂಸ್ಥೆ ಪರಿಣಾಮಕಾರಿ ಸಾಧನೆ ಮಾಡಿದೆ. ತಂತ್ರಜ್ಞಾನ, ಹೊಸ ಸೇವೆಗಳ ಆರಂಭ ಮತ್ತು ಪಾಲುದಾರಿಕೆಯ ವಿಚಾರದಲ್ಲಿಯೂ ಫ್ಲಿಪ್ಕಾರ್ಟ್ ವೇಗವಾಗಿ ಮುಂದುವರೆಯುತ್ತಿದೆ. ಸೇವೆಗಳನ್ನು ಮತ್ತಷ್ಟು ತ್ವರಿತಗೊಳಿಸುವ ಹಾಗೂ ಹೆಚ್ಚಿಸುವ ಸಲುವಾಗಿ ಭಾರತೀಯ ವ್ಯಾಪಾರಿಗಳನ್ನು ಆನ್ಲೈನ್ ಸೇವೆಯಡಿಯಲ್ಲಿ ತರುವ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ ಎಂದು ಕಲ್ಯಾಣ್ ತಿಳಿಸಿದ್ದಾರೆ.
ವಾಲ್ ಮಾರ್ಟ್ ಸಂಸ್ಥೆಯು ಫ್ಲಿಪ್ಕಾರ್ಟ್ನಲ್ಲಿ 16 ಬಿಲಿಯನ್ಗಳಷ್ಟು ಹೂಡಿಕೆ ಮಾಡಿದ್ದು, ಆ ಮೂಲಕ ಬಹುಪಾಲು ಪಾಲುದಾರಿಕೆಯನ್ನು ತನ್ನದಾಗಿಸಿಕೊಂಡಿದೆ ಎಂದೂ ಸಂಸ್ಥೆ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.