ನವದೆಹಲಿ: ಭಾರತದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ವಿಶ್ವದ 6ನೇಯ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆರನೇಯ ಸ್ಥಾನದಲ್ಲಿದ್ದ ಆಲ್ಫಾಬೆಟ್ನ ಸಹ ಸಂಸ್ಥಾಪಕ ಲ್ಯಾರಿ ಪೇಜ್ ಅವರನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ್ದಾರೆ. ವಾರದ ಹಿಂದಷ್ಟೇ 8ನೇ ಸ್ಥಾನವನ್ನು ಕಾಯ್ದುಕೊಂಡಿದ್ದ ಅಂಬಾನಿ ಇದೀಗ 6 ನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಅವರ ನಿವ್ವಳ ಆದಾಯದ ಮೌಲ್ಯ ಸೋಮವಾರ 2.17 ಬಿಲಿಯನ್ ಏರಿಕೆಯಾಗಿ 72.4 ಬಿಲಿಯನ್ಗೆ ಏರಿಕೆಯಾಗಿದೆ. ಸದ್ಯ 63 ವರ್ಷದ ಮುಖೇಶ್ ಅಂಬಾನಿ ಅವರು ವಿಶ್ವದ ಐವರು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚಿನ ಬ್ಲೂಮ್ ಬರ್ಗ್ ಬಿಲಿಯನೇರ್ಗಳ ಸೂಚ್ಯಂಕದಲ್ಲಿ 472.17 ಬಿಲಿಯನ್ ಹೆಚ್ಚಾಗಿದ್ದು, ಕೇವಲ 22 ದಿನಗಳಲ್ಲಿ ರಿಲಯನ್ಸ್ ಷೇರುಗಳಲ್ಲಿ ದಾಖಲೆಯ 97.9 ಶತಕೋಟಿ ಹಣವನ್ನು ಸಂಪತ್ತಿಗೆ ಸೇರಿಸಿಕೊಂಡಿದ್ದಾರೆ. ಈ ವರ್ಷದಲ್ಲಿ ಆರ್ಐಎಲ್ 29% ದಷ್ಟು ಏರಿಕೆಯಾಗಿದ್ದು, ಆ ಮೂಲಕ ಸೆನ್ಸೆಕ್ಸ್ ಅನ್ನು ಮೀರಿಸಿದೆ.
ಇತ್ತೀಚೆಗಷ್ಟೇ ರಿಲಯನ್ಸ್ನಲ್ಲಿ ವಿದೇಶೀ ಸಂಸ್ಥೆಗಳ ಹೂಡಿಕೆಯೂ ಹೆಚ್ಚಾಗಿದ್ದು, ಆ ಮೂಲಕ ಕೊರೋನಾ ಸಂದರ್ಭದಲ್ಲಿಯೂ ಹೊಸ ದಾಖಲೆ ನಿರ್ಮಿಸಿತ್ತು. ಇದಾದ ನಂತರದಲ್ಲಿ ರಿಲಯನ್ಸ್ ಸಾಲ ಮುಕ್ತ ಸಂಸ್ಥೆ ಎಂದೂ ಘೋಷಿಸಿಕೊಂಡಿತ್ತು. ಅಲ್ಲದೆ ರಿಲಾಯನ್ಸ್ ಜಿಯೋದ ಷೇರುಗಳನ್ನು ಹೆಚ್ಚಿಸುವ ಬಗ್ಗೆಯೂ ಸಂಸ್ಥೆ ಮಾಹಿತಿ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.