ನವದೆಹಲಿ: ಇನ್ಶ್ಯೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI) 29 ಸಾಮಾನ್ಯ ಮತ್ತು ಆರೋಗ್ಯ ವಿಮಾ ಪಾಲಿಸಿದಾರರಿಗೆ ಕಡಿಮೆ ಅವಧಿಯ ಕೊರೋನಾ ಕವಚ್ ವಿಮಾ ಪಾಲಿಸಿಗಳ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ.
ಕೊರೋನಾ ವೈರಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ಬರುವ ಖರ್ಚು ವೆಚ್ಚಗಳನ್ನು ನಿಭಾಯಿಸುವಲ್ಲಿ ಇದು ರೋಗಿಗಳಿಗೆ ಸಹಾಯ ಮಾಡಲಿದೆ ಎಂದೂ IRDAI ಮಾಹಿತಿ ನೀಡಿದೆ. ಈ ಪಾಲಿಸಿಯು 50 ಸಾವಿರ ರೂ.ಗಳಿಂದ ತೊಡಗಿದಂತೆ 5 ಲಕ್ಷ ರೂ.ಗಳ ವಿಮಾ ಮೊತ್ತವನ್ನು ಒಳಗೊಂಡಿರುತ್ತದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯ ರೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಮಾ ಪಾಲಿಸಿಯನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತದೆ ಎಂದೂ ಮೂಲಗಳು ತಿಳಿಸಿವೆ.
18 ರಿಂದ 65 ವರ್ಷಗಳೊಳಗಿನ ಜನ ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಈ ವಿಮಾ ಪಾಲಿಸಿಯನ್ನು ಆರಂಭಿಸಲಾಗುತ್ತದೆ. ಜನರು ತಮಗೆ ಮತ್ತು ತಮ್ಮನ್ನು ಅವಲಂಬಿಸಿಕೊಂಡು ಬದುಕು ನಡೆಸುತ್ತಿರುವ ಇತರರ ಹೆಸರಿನಲ್ಲಿಯೂ ಈ ವಿಮಾ ಪಾಲಿಸಿಯನ್ನು ಆರಂಭ ಮಾಡಬಹುದಾಗಿದೆ ಎಂದು IRDAI ತಿಳಿಸಿದೆ. ರೋಗಿಯು ಆಸ್ಪತ್ರೆಗೆ ದಾಖಲಾದ ದಿನದಿಂದಲೂ ಹಿಡಿದು ಅವರ ಸ್ಥಿತಿ ಗತಿಗಳನ್ನು ಗಮನದಲ್ಲಿಟ್ಟುಕೊಂಡು ವಿಮಾ ಮೊತ್ತವನ್ನು ನೀಡಲಾಗುತ್ತದೆ. ಈ ವಿಮಾ ಪಾಲಿಸಿಯನ್ನು ಜಾರಿಗೆ ತರಲು IRDAI 30 ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪೆನಿಗಳಿಗೆ ಅವಕಾಶವನ್ನು ನೀಡಿದೆ ಎಂದೂ ಮೂಲಗಳು ಮಾಹಿತಿ ನೀಡಿವೆ.
ಈ ಆದೇಶದ ಅನ್ವಯ ದೇಶದಾದ್ಯಂತ ಈಗಾಗಲೇ ಹಲವಾರು ವಿಮಾ ಕಂಪೆನಿಗಳು ಈ ಯೋಜನೆಯನ್ನು ಜಾರಿಗೆ ತಂದಿವೆ. ಮೂರೂವರೆ ತಿಂಗಳ ಅವಧಿ, ಆರೂವರೆ ತಿಂಗಳು ಮತ್ತು ಒಂಬತ್ತೂವರೆ ತಿಂಗಳುಗಳ ಒಟ್ಟು ಮೂರು ರೀತಿಯ ಕಾಲಾವಧಿಯನ್ನು ಒಳಗೊಂಡ ವಿಮಾ ಪಾಲಿಸಿಗಳನ್ನು ಆರಂಭಿಸುವುದಾಗಿಯೂ ವಿಮಾ ಸಂಸ್ಥೆಗಳು ತಿಳಿಸಿವೆ. ಕೊರೋನಾ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಮತ್ತು ಮನೆಯಲ್ಲಿಯೇ ಪಡೆಯುತ್ತಿರುವ ರೋಗಿಗಳಿಗೂ ಈ ವಿಮಾ ಪಾಲಿಸಿ ಅನ್ವಯವಾಗುವುದಾಗಿ IRDAI ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.