ನವದೆಹಲಿ: ಭದ್ರತಾ ವಿಷಯಗಳ ಹಿನ್ನೆಲೆಯಲ್ಲಿ ಚೀನಾದ ಆ್ಯಪ್ಗಳನ್ನು ನಿಷೇಧಿಸಿದ ವಾರಗಳ ನಂತರ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 59 ನಿಷೇಧಿತ ಚೀನೀ ಅಪ್ಲಿಕೇಶನ್ಗಳಿಗೆ ಹೊಸ ನೋಟಿಸ್ ಕಳುಹಿಸಿದ್ದು, ಇದರಲ್ಲಿ ಸರ್ಕಾರವು ಸಮಗ್ರ 79 ಪ್ರಶ್ನೆಗಳನ್ನು ಕೇಳಿದೆ.
ಈ ಪ್ರಶ್ನೆಗಳಲ್ಲಿ ನಿಷೇಧಿತ ಚೀನೀ ಸಂಸ್ಥೆಗಳಿಂದ ಗೂಢಚರ್ಯೆ ಮತ್ತು ಕಣ್ಗಾವಲುಗಳಿಗೆ ಕಾರಣವಾಗಬಹುದಾದಂತಹ “ಅನಧಿಕೃತ ದತ್ತಾಂಶ ಪ್ರವೇಶ”ದ ಬಗ್ಗೆ ಸರ್ಕಾರವು ವಿವರಗಳನ್ನು ಕೋರಿದೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಸಚಿವಾಲಯವು ಅವರಿಗೆ ಮೂರು ವಾರಗಳ ಕಾಲಾವಕಾಶ ನೀಡಿದೆ. ಈ ನಿಷೇಧಿತ ಅಪ್ಲಿಕೇಶನ್ಗಳು ಜುಲೈ 22 ರೊಳಗೆ ಪ್ರತಿಕ್ರಿಯಿಸದಿದ್ದರೆ, ಅವುಗಳ ಮೇಲೆ ವಿಧಿಸಲಾದ ನಿಷೇಧವು ಶಾಶ್ವತವಾಗಿರುತ್ತದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
“ಐಟಿ ಕಾಯ್ದೆಯ ಸೆಕ್ಷನ್ 69 ಮತ್ತು ಸಾರ್ವಭೌಮ ರಾಷ್ಟ್ರದ ಅಧಿಕಾರದ ಅಡಿಯಲ್ಲಿ ಅಪ್ಲಿಕೇಶನ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ” ಎಂದು ಸಚಿವಾಲಯ ಸೂಚನೆಯಲ್ಲಿ ತಿಳಿಸಿದೆ.
ಮೂಲಗಳ ಪ್ರಕಾರ, ಈ ನಿಷೇಧಿತ ಚೀನೀ ಅಪ್ಲಿಕೇಶನ್ಗಳಿಂದ ಸರ್ಕಾರವು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ ನಂತರ, ಅವುಗಳು ನೀಡಿರುವ ಉತ್ತರಗಳನ್ನು ಉನ್ನತ ಮಟ್ಟದ ಸಮಿತಿಯು ಅಧ್ಯಯನ ಮಾಡುತ್ತದೆ. ಈ ಸಮಿತಿ ಗುಪ್ತಚರ ಬ್ಯೂರೋ, ಸೈಬರ್ ಸೆಕ್ಯುರಿಟಿ ವಿಭಾಗ, ದೂರಸಂಪರ್ಕ ಇಲಾಖೆ, ಆಂತರಿಕ ಭದ್ರತೆ ಮತ್ತು ಐಟಿ ಸಚಿವಾಲಯದ ಸದಸ್ಯರನ್ನು ಹೊಂದಿರುತ್ತದೆ.
ಜೂನ್ 29 ರಂದು ಗೃಹ ಸಚಿವಾಲಯವು ಟಿಕ್-ಟಾಕ್, ಹೆಲೋ, ಕ್ಸೆಂಡರ್, ಯುಸಿ ಬ್ರೌಸರ್, ಕ್ಸೀನ್, ಕ್ಲಬ್ ಫ್ಯಾಕ್ಟರಿ ಸೇರಿದಂತೆ 59 ಚೀನೀ ಅಪ್ಲಿಕೇಶನ್ಗಳನ್ನು ನಿಷೇಧಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.