ನವದೆಹಲಿ: ಅತಿದೊಡ್ಡ ಕ್ಯಾಮೆರಾ-ಟ್ರ್ಯಾಪ್ ವನ್ಯಜೀವಿ ಸಮೀಕ್ಷೆ ಎಂಬ ಕಾರಣಕ್ಕಾಗಿ 2018ರ ಭಾರತದ ಹುಲಿ ಗಣತಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಅನ್ನು ಪ್ರವೇಶಿಸಿದೆ.
ಈ ಬಗ್ಗೆ ಟ್ವಿಟರ್ ಮೂಲಕ ಸುದ್ದಿ ಹಂಚಿಕೊಂಡಿರುವ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಅವರು, ಗುರಿಗಿಂತ ನಾಲ್ಕು ವರ್ಷಗಳು ಮುಂಚಿತವಾಗಿಯೇ ದೇಶದಲ್ಲಿ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ಸಂಕಲ್ಪ ಸಿದ್ಧಿಯ ಮೂಲಕ 4 ವರ್ಷಗಳ ಮೊದಲೇ ಹುಲಿ ಸಂಖ್ಯೆಯನ್ನು ದ್ವಿಗುಣಗೊಳಿಸುವ ಸಂಕಲ್ಪವನ್ನು ಈಡೇರಿಸಿದೆ. ಅಖಿಲ ಭಾರತ ಹುಲಿ ಗಣತಿ ಈಗ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಗೊಂಡಿದೆ. ನಿಜಕ್ಕೂ ಇದು ಒಂದು ದೊಡ್ಡ ಕ್ಷಣ ಮತ್ತು ಆತ್ಮನಿರ್ಭರ ಭಾರತಕ್ಕೆ ಇದು ಪ್ರಖರ ಉದಾಹರಣೆ” ಎಂದಿದ್ದಾರೆ.
2018ರ ಗಣತಿ ಪ್ರಕಾರ ಭಾರತದ ಕಾಡಿನಲ್ಲಿ 2,967 ಹುಲಿಗಳಿದ್ದು, ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿವೆ ಎಂದು ಹುಲಿ ಅಂದಾಜು ವರದಿಯಲ್ಲಿ ತಿಳಿಸಲಾಗಿದೆ.
ಜೋಡಿ ಕ್ಯಾಮೆರಾ ಟ್ರ್ಯಾಪ್ಗಳನ್ನು 139 ಅಧ್ಯಯನ ತಾಣಗಳಲ್ಲಿ 26,760 ವಿವಿಧ ಸ್ಥಳಗಳಲ್ಲಿ ಇರಿಸಲಾಗಿತ್ತು, ಇದು 76,523 ಹುಲಿ ಮತ್ತು 51,337 ಚಿರತೆ ಫೋಟೋಗಳನ್ನು ಒಳಗೊಂಡಂತೆ ಸುಮಾರು 35 ಮಿಲಿಯನ್ ಫೋಟೋಗಳನ್ನು ಸೃಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.