ನವದೆಹಲಿ: ವೀಡಿಯೊ ಶೇರಿಂಗ್ ಅಪ್ಲಿಕೇಶನ್ ಟಿಕ್ಟಾಕ್ನ ಮೂಲ ಕಂಪನಿ ಬೈಟ್ಡ್ಯಾನ್ಸ್ ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದಲ್ಲಿ ತೀವ್ರ ಹಿನ್ನೆಡೆಯನ್ನು ಎದುರಿಸಿದ ಹಿನ್ನಲೆಯಲ್ಲಿ, ಅಪ್ಲಿಕೇಶನ್ನ ಸಾಂಸ್ಥಿಕ ರಚನೆಯನ್ನು ಬದಲಾಯಿಸಲು ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ವರದಿಯ ಪ್ರಕಾರ, ಚೀನಾದ ಇಂಟರ್ನೆಟ್ ದಿಗ್ಗಜ ಬೈಟ್ಡ್ಯಾನ್ಸ್ ಟಿಕ್ಟಾಕ್ ಹೊಸ ನಿರ್ವಹಣಾ ಮಂಡಳಿಯನ್ನು ರಚಿಸಲು ಯೋಜನೆ ರೂಪಿಸುತ್ತಿದೆ ಅಥವಾ ಅಪ್ಲಿಕೇಶನ್ನ ಕಾರ್ಯಾಚರಣೆಯನ್ನುಚೀನಾದಿಂದ ಹೊರಗೆ ಇಡುವತ್ತ ಪ್ರಯತ್ನ ನಡೆಸುತ್ತಿದೆ. ಚೀನಾದ ಹೊರಗೆ ಅಪ್ಲಿಕೇಶನ್ಗೆ ಪ್ರಧಾನ ಕಛೇರಿಯನ್ನು ಸ್ಥಾಪಿಸುವ ಆಯ್ಕೆಯತ್ತಲೂ ಅದು ಗಮನಹರಿಸಿದೆ ಎಂದು ಹೇಳಲಾಗಿದೆ.
“ನಾವು ನಮ್ಮ ಬಳಕೆದಾರರ ಖಾಸಗಿತನವನ್ನು ರಕ್ಷಿಸಲು ಸಂಪೂರ್ಣ ಬದ್ಧರಾಗಿದ್ದೇವೆ ಮತ್ತು ನಾವು ಸೃಜನಶೀಲತೆಯನ್ನು ಉತ್ತೇಜಿಸುತ್ತೇವೆ, ಕೋಟ್ಯಾಂತರ ಜನರಿಗೆ ಮನೋರಂಜನೆ, ಸಂತೋಷ ನೀಡುತ್ತೇವೆ. ಉತ್ತಮ ಮುನ್ನಡೆಯುವಿಕೆಗಾಗಿ ಬೈಟ್ಡ್ಯಾನ್ಸ್ ಟಿಕ್ಟಾಕ್ನ ಕಾರ್ಪೋರೇಟ್ ರಚನೆಯಲ್ಲಿ ಬದಲಾವಣೆ ತರಲು ಯೋಜಿಸುತ್ತಿದೆ” ಎಂದು ಟಿಕ್ಟಾಕ್ ವಕ್ತಾರರು ಹೇಳಿದ್ದಾರೆ.
ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಚೀನಾದ ಅಪ್ರಚೋದಿತ ಆಕ್ರಮಣಶೀಲತೆಗೆ ಪ್ರತಿಕ್ರಿಯೆಯಾಗಿ ನರೇಂದ್ರ ಮೋದಿ ಸರ್ಕಾರ 59 ಚೈನೀಸ್ ಆ್ಯಪ್ ಅನ್ನು ನಿಷೇಧಿಸಿದೆ. ಇದರಿಂದ ಬೈಟ್ಡ್ಯಾನ್ಸ್ಗೆ $6 ಬಿಲಿಯನ್ ನಷ್ಟ ಸಂಭವಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.