ಭೋಪಾಲ್: ಮಧ್ಯಪ್ರದೇಶದ ರೀವಾದಲ್ಲಿ ನಿರ್ಮಾಣ ಮಾಡಲಾದ ಏಷ್ಯಾದ ಅತೀದೊಡ್ಡ ಅಲ್ಟ್ರಾ ಮೆಗಾ ಸೌರಶಕ್ತಿ ಸ್ಥಾವರವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದರು. 750 ಮೆಗಾವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಸ್ಥಾವರ ಇದಾಗಿದೆ.
ರೀವಾ ಯೋಜನೆಯು ವರ್ಷಕ್ಕೆ ಸುಮಾರು 15 ಲಕ್ಷ ಟನ್ CO2 ಗೆ ಸಮಾನವಾದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ,
ಈ ಯೋಜನೆಯು ಸೌರ ಉದ್ಯಾನವನದೊಳಗೆ ಇರುವ 500 ಹೆಕ್ಟೇರ್ ಭೂಮಿಯಲ್ಲಿ 250 ಮೆಗಾವ್ಯಾಟ್ನ ಮೂರು ಸೌರ ಉತ್ಪಾದನಾ ಘಟಕಗಳನ್ನು ಒಳಗೊಂಡಿದೆ. ಸೌರ ಉದ್ಯಾನವನ್ನು ರೀವಾ ಅಲ್ಟ್ರಾ ಮೆಗಾ ಸೋಲಾರ್ ಲಿಮಿಟೆಡ್ (RUMSL) ಅಭಿವೃದ್ಧಿಪಡಿಸಿದೆ. ಇದು ಮಧ್ಯಪ್ರದೇಶ ಉರ್ಜಾ ವಿಕಾಸ್ ನಿಗಮ್ ಲಿಮಿಟೆಡ್ನ ಜಂಟಿ ಉದ್ಯಮ ಕಂಪನಿಯಾಗಿದೆ ಮತ್ತು ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾದ ಸೌರ ಶಕ್ತಿ ನಿಗಮವಾಗಿದೆ. ಉದ್ಯಾನದ ಅಭಿವೃದ್ಧಿಗೆ 138 ಕೋಟಿ ರೂಪಾಯಿಗಳ ಕೇಂದ್ರ ಹಣಕಾಸು ಸಹಾಯವನ್ನು RUMSLಗೆ ನೀಡಲಾಗಿದೆ.
ಉದ್ಘಾಟನೆಗೊಳಿಸಿ ಮಾತನಾಡಿದ ಮೋದಿ, ” ರೀವಾ ಸೌರ ಸ್ಥಾವರವು ಈ ದಶಕದಲ್ಲಿ ಈ ಇಡೀ ಪ್ರದೇಶವನ್ನು ದೊಡ್ಡ ವಿದ್ಯುತ್ ಕೇಂದ್ರವನ್ನಾಗಿ ಮಾಡಲು ಸಹಾಯ ಮಾಡಲಿದೆ.ಈ ಸೌರ ಸ್ಥಾವರದಿಂದ, ಮಧ್ಯಪ್ರದೇಶದ ಜನರಿಗೆ ಮತ್ತು ಇಲ್ಲಿನ ಕೈಗಾರಿಕೆಗಳಿಗೆ ವಿದ್ಯುತ್ ಸಿಗುವುದು ಮಾತ್ರವಲ್ಲದೇ, ದೆಹಲಿಯ ಮೆಟ್ರೋ ರೈಲು ಕೂಡ ಇದರ ಪ್ರಯೋಜನಗಳನ್ನು ಪಡೆಯುತ್ತದೆ.ಈ ಯೋಜನೆ ಸಂಪೂರ್ಣ ಸಿದ್ಧಗೊಂಡಾಗ, ಮಧ್ಯಪ್ರದೇಶ ಖಂಡಿತವಾಗಿಯೂ ಅಗ್ಗದ ಮತ್ತು ಶುದ್ಧ ವಿದ್ಯುತ್ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತದೆ. ಇದರ ದೊಡ್ಡ ಲಾಭ ಮಧ್ಯಪ್ರದೇಶದ ಬಡ, ಮಧ್ಯಮ ವರ್ಗದ ಕುಟುಂಬಗಳು, ರೈತರು, ಬುಡಕಟ್ಟು ಜನಾಂಗದವರಿಗೆ ಸಿಗಲಿದೆ” ಎಂದಿದ್ದಾರೆ.
“ನಾವು ಸೌರಶಕ್ತಿಯನ್ನು ಸಂಪೂರ್ಣವಾಗಿ ಎಲ್ಲಿಯವರೆಗೆ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ, ಅಲ್ಲಿಯವರೆಗೆ ನಮ್ಮಲ್ಲಿ ಉತ್ತಮ ಸೌರ ಫಲಕ, ಉತ್ತಮ ಬ್ಯಾಟರಿ, ಉತ್ತಮ ಗುಣಮಟ್ಟದ ಶೇಖರಣಾ ಸಾಮರ್ಥ್ಯ ಇರುವುದಿಲ್ಲ. ಈಗ ಈ ದಿಕ್ಕಿನಲ್ಲಿ ವೇಗವಾಗಿ ಕೆಲಸ ನಡೆಯುತ್ತಿದೆ” ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.